ETV Bharat / state

ಕೋವಿಡ್ ಹೋರಾಟದ ನಡುವೆ ರಾಜಕೀಯ ಚರ್ಚೆ ಸಲ್ಲದು: ಸುರೇಶ್ ಕುಮಾರ್​ - ಚಾಮರಾಜನಗರ ಸುದ್ದಿ

ಸಿಎಂ ಯಡಿಯೂರಪ್ಪ ರಾಜೀನಾಮೆ ಹೇಳಿಕೆ ರಾಜ್ಯಾದ್ಯಂತ ಸುದ್ದಿಯಲ್ಲಿದೆ. ಆದ್ರೆ ಕೆಲ ರಾಜಕೀಯ ನಾಯಕರು ಇದಕ್ಕೆ ಪುಷ್ಟಿ ನೀಡಿದರೆ, ಇನ್ನು ಕೆಲವರು ತಳ್ಳಿಹಾಕಿದ್ದಾರೆ. ಈ ನಡುವೆ ಸಚಿವ ಸುರೇಶ್​ ಕುಮಾರ್​ ಕೋವಿಡ್​ ಸಂಕಷ್ಟದ ನಡುವೆ ರಾಜಕೀಯ ಚರ್ಚೆ ಬೇಡವೆಂದರು.

Suresh Kumar
ಸುರೇಶ್ ಕುಮಾರ್​
author img

By

Published : Jun 9, 2021, 10:11 AM IST

ಚಾಮರಾಜನಗರ: ಕೋವಿಡ್ ವಿರುದ್ಧದ ಹೋರಾಟದ ಸಮಯದಲ್ಲಿ ಸಿಎಂ ಬದಲಾವಣೆ, ರಾಜೀನಾಮೆ ಎಂಬ ವಿಚಾರಗಳನ್ನು ಚರ್ಚಿಸಬಾರದು. ಅದಕ್ಕೆ ಸಮಯ, ಆಸ್ಪದವನ್ನು ಕೊಡಬಾರದೆಂದು ಸಚಿವ ಸುರೇಶ್ ಕುಮಾರ್ ಹೇಳಿದರು.

ಗುಂಡ್ಲುಪೇಟೆಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್​

ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ಕೊರೊನಾಮುಕ್ತ ಕರ್ನಾಟಕ ಗುರಿ ಹಾಕಿಕೊಂಡಿದ್ದೇವೆ. ಅದರ ಮೇಲಷ್ಟೇ ನಮ್ಮ ಗಮನ ಎನ್ನುವ ಮೂಲಕ ಸಿಎಂ ರಾಜೀನಾಮೆ ಹೇಳಿಕೆಗೆ ಪ್ರತಿಕ್ರಿಯೆ ಕೊಡಲು ನಿರಾಕರಿಸಿದರು.

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕಿನ ಪ್ರಕರಣ ಕಡಿಮೆಯಾಗುತ್ತಿದೆ. ಲಾಕ್​ಡೌನ್ ಅನ್ಲಾಕ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ತಜ್ಞರ ಮಾಹಿತಿ ಸಲಹೆ ಪಡೆದ ಬಳಿಕ ನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಸೂಚನೆಯಂತೆ ಎಲ್ಲಾ ಕ್ಷೇತ್ರಗಳಲ್ಲಿ ಶಾಸಕರುಗಳು ಕೋವಿಡ್ ನಿಯಂತ್ರಣ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.

ಬಳಿಕ ಗುಂಡ್ಲುಪೇಟೆ ತಾಲೂಕಿನ ಹುಂಡೀಪುರ, ಬಾಚಹಳ್ಳಿ, ಅನ್ನೂರುಕೇರಿ, ಶಿವಪುರ ಗ್ರಾಮ ಪಂಚಾಯ್ತಿಗಳಲ್ಲಿ ಕೋವಿಡ್ ಟಾಸ್ಕ್ ಪೋರ್ಸ್ ಸಭೆ ನಡೆಸಿದರು.

ಇದನ್ನೂ ಓದಿ: 'ಭಾರತ ಸಿಂಧೂರಿ': ಬಯೋಪಿಕ್‌ ಆಗಿ ಬರಲಿದೆ ರೋಹಿಣಿ ಸಿಂಧೂರಿ ಜೀವನಕಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.