ETV Bharat / state

ನೌಕರಿ ಸಿಗದೇ ಜಿಗುಪ್ಸೆ; ಚಾಮರಾಜನಗರದಲ್ಲಿ ಯುವಕ ವಿಷ ಸೇವಿಸಿ ಆತ್ಮಹತ್ಯೆ - ಚಾಮರಾಜನಗರದಲ್ಲಿ ಯುವಕ ವಿಷ ಸೇವಿಸಿ ಆತ್ಮಹತ್ಯೆ

ಕೆಲಸ ಸಿಗದೇ ಮನನೊಂದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜಗರದಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

Garduate suicide in chamarajanagar
Garduate suicide in chamarajanagar
author img

By

Published : Feb 13, 2022, 1:24 AM IST

ಚಾಮರಾಜನಗರ: ನೌಕರಿ ಸಿಗದಿದ್ದಕ್ಕೇ ಜಿಗುಪ್ಸೆಗೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ನಡೆದಿದೆ.

ಜ್ಯೋತಿಗೌಡನಪುರ ಗ್ರಾಮದ ಮನು(22) ಎಂಬಾತ ಮೃತ ಯುವಕ. ಈತ ಇತ್ತೀಚೆಗೆ ವಿದ್ಯಾಭ್ಯಾಸ ಮುಗಿಸಿದ್ದು, ಯಾವುದೇ ನೌಕರಿ ಸಿಗದಿದ್ದರಿಂದ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ, ಕ್ರಿಮಿನಾಶಕ ಸೇವಿಸಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ.

ಇದನ್ನೂ ಓದಿರಿ: ಐದು ವರ್ಷವಾದ್ರೂ ತೆರಿಗೆ ಕೊರತೆ ನೀಗಿಸದ ಜಿಎಸ್​ಟಿ; ರಾಜ್ಯದ ತೆರಿಗೆ ಸಂಗ್ರಹದ ಪ್ರಗತಿ ಹೇಗಿದೆ?

ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಾಸುದಾರರಿಗೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.