ಚಾಮರಾಜನಗರ: ದೀಪಾವಳಿ ಬಂದರೆ ಪಟಾಕಿ ಬೇಕು ಎಂದು ಹಠ ಹಿಡಿಯುವ ಮಕ್ಕಳ ನಡುವೆ ಪರಿಸರ ಉಳಿಸುವತ್ತಾ ಹೆಜ್ಜೆ ಹಾಕಿದ್ದಾರೆ ಈ ಚಿಣ್ಣರು.
ಗುಂಡ್ಲುಪೇಟೆ ತಾಲೂಕು ಹೊಂಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರತಿ ವರ್ಷದಂತೆ ಈ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಪರಿಸರ ಪ್ರೇಮ ಮೆರೆದಿದ್ದಾರೆ.
ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವ ಬದಲು ಮಣ್ಣಿನ ಹಣತೆ ಹಚ್ಚುವ ಮೂಲಕ ಬೆಳಕಿನ ಹಬ್ಬ ಆಚರಿಸಿ ಭೂಮಿ, ಶಬ್ಧ ಹಾಗೂ ಗಾಳಿಯನ್ನು ಕಲುಷಿತಗೊಳಿಸದೇ ನಮ್ಮ ಹಬ್ಬವನ್ನು ಪರಿಸರಸ್ನೇಹಿಯಾಗಿಸುತ್ತೇವೆ ಎಂದು ಶಪಥ ಮಾಡಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಮಹಾದೇವಸ್ವಾಮಿ ನೇತೃತ್ವದಲ್ಲಿ ಮಕ್ಕಳು ಪ್ರತಿಜ್ಞೆಗೈದಿದ್ದು, ಇದೇ ರೀತಿ ಕಳೆದ ವರ್ಷ ಪೋಷಕರು ಪಟಾಕಿಗೆ ಹಣ ನೀಡಿದಾಗ ಗಿಡ ತಂದು ಶಾಲೆಯಲ್ಲಿ ನೆಡುವ ಮೂಲಕ ಗಮನ ಸೆಳೆದಿದ್ದರು.