ETV Bharat / state

ಮೂಲಸೌಕರ್ಯ ಇಲ್ಲದೇ ಪರದಾಟ: ರೋಗಿಯನ್ನು ಡೋಲಿಯಲ್ಲಿ ಹೊತ್ತು 10 ಕಿಮೀ ದೂರದ ಆಸ್ಪತ್ರೆಗೆ ರವಾನೆ - ಜನ ವನ ಸಾರಿಗೆ ಸ್ತಬ್ಧ

ರೋಗಿಯನ್ನು 10 ಕಿ.ಮೀ ಡೋಲಿಯಲ್ಲಿ ಹೊತ್ತು ಸಾಗಿದ ಜನರು - ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ದೊಡ್ಡಾನೆ ಗ್ರಾಮದಲ್ಲಿ ಘಟನೆ

noo-basic-infrastructure-doddane-village
ಮೂಲಸೌಕರ್ಯ ಇಲ್ಲದೆ ಪರದಾಟ : ರೋಗಿಯನ್ನು ಡೋಲಿಯಲ್ಲಿ ಹೊತ್ತು 10 ಕಿಮೀ ದೂರದ ಆಸ್ಪತ್ರೆಗೆ ರವಾನೆ
author img

By

Published : Jan 19, 2023, 11:08 PM IST

ಚಾಮರಾಜನಗರ : ಅನಾರೋಗ್ಯಕ್ಕೀಡಾದ ವ್ಯಕ್ತಿಯನ್ನು 10 ಕಿ.ಮೀ ಡೋಲಿಯಲ್ಲಿ ಆಸ್ಪತ್ರೆಗೆ ಹೊತ್ತು ಸಾಗಿಸಿರುವ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ದೊಡ್ಡಾನೆ ಗ್ರಾಮದಲ್ಲಿ ನಡೆದಿದೆ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ದೊಡ್ಡಾನೆ ಗ್ರಾಮದ ಮಹದೇವ್ ಎಂಬವರು ಇಂದು ಮಧ್ಯಾಹ್ನ ದಿಢೀರ್ ಅಸ್ವಸ್ಥರಾಗಿದ್ದಾರೆ. ಈ ವೇಳೆ ಆಸ್ಪತ್ರೆಗೆ ಸಾಗಿಸಲು ವಾಹನ ಲಭ್ಯವಾಗದ ಕಾರಣ ಡೋಲಿ ಮೂಲಕ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಹೆಚ್ಚಿನ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.

ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ : ಇಲ್ಲಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತ್​ ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಲು ಸರಿಯಾದ ರಸ್ತೆ ಸೌಕರ್ಯ ಇಲ್ಲ. ಜೊತೆಗೆ ಸೂಕ್ತವಾದ ಸಾರಿಗೆ ವ್ಯವಸ್ಥೆ ಇಲ್ಲದೆ ಜನರು ಪರಿತಪಿಸುತವಂತಾಗಿದೆ. ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪ್ರಾಧಿಕಾರದವರಿಗೆ ಹಲವು ಬಾರಿ ಮನವಿ ಸಲ್ಲಿಸಿರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಈ ಕಾಡಂಚಿನ ಗ್ರಾಮಗಳ ರಸ್ತೆ ಹಾಳಾಗಿರುವುದರಿಂದ ಆ್ಯಂಬುಲೆನ್ಸ್​ ವಾಹನ ಸಂಚಾರವೂ ಸಾಧ್ಯವಿಲ್ಲ. ಇದರಿಂದ ಇಲ್ಲಿಯ ರೋಗಿಗಳು ನರಕಯಾತನೆ ಅನುಭವಿಸುವಂತಾಗಿದೆ.

ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ : ಇನ್ನು ಗರ್ಭಿಣಿಯರನ್ನು ಡೋಲಿಯಲ್ಲಿ ಆಸ್ಪತ್ರೆಗೆ ಕರೆ ತರುವಾಗ ಮಾರ್ಗ ಮಧ್ಯಯೇ ಹೆರಿಗೆಯಾಗಿರುವ ಘಟನೆಗಳು ನಡೆದಿವೆ. ಇನ್ನು ಕೆಲವು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತಲುಪಲಾಗದೇ ಮೃತಪಟ್ಟಿರುವ ಘಟನೆಗಳು ನಡೆದಿವೆ. ಇಷ್ಟಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : 5 ಕಿ.ಮೀ ದೂರ ಜೋಲಿಯಲ್ಲಿ ಹೊತ್ತು ರೋಗಿಯ ಸಾಗಾಟ; ತುರ್ತುಸೇವೆಗೆ ವರೀಣಬೇಣಾ ಗ್ರಾಮಸ್ಥರ ಪರದಾಟ

ಜನ ವನ ಸಾರಿಗೆ ಸ್ತಬ್ಧ: ಈ ಹಿಂದೆ ಮೆಂದಾರೆ, ತುಳಸಿಕೆರೆ, ಇಂಡಿಗನತ್ತ, ಪಡಸಲನತ್ತ, ಮೆದಗನಾಣೆ, ಪಾಲಾರ್, ದೊಡ್ಡಣೆ, ತೊಕೆರೆ, ಕೊಕ್ಕಬರೆ ಗ್ರಾಮಗಳಿಗೆ ಜನ ವನ ಸಾರಿಗೆ ಎಂಬ ಯೋಜನೆ ಆರಂಭಿಸಿ ಮೂರು ಜೀಪ್ ಗಳನ್ನು ಕೊಡಲಾಗಿತ್ತು. ಇದು ಮಕ್ಕಳು ಶಾಲೆಗೆ ಕರೆದೊಯ್ಯಲು, ಆಸ್ಪತ್ರೆಗೆ ತೆರಳಲು, ನಿತ್ಯದ ಸಂಚಾರಕ್ಕಾಗಿ ಒಂದೆರೆಡು ತಿಂಗಳು ವಾಹನ ಬಳಕೆಯಾಗಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ ರಸ್ತೆ ಹದಗೆಟ್ಟಿರುವುದರಿಂದ ಹಾಗೂ ಚಾಲಕರಿಗೆ ಸಂಬಳ ನೀಡದೇ ಇರುವುದರಿಂದ ಜನವನ ಸೌಕರ್ಯ ಇದ್ದೂ ಇಲ್ಲದಂತಾಗಿದೆ.

ಮೂಲ ಸೌಕರ್ಯ ಇಲ್ಲದೆ ಜನ ಪರದಾಟ : ಇಂಡಿಗನತ್ತ ಗ್ರಾಮದ ರಸ್ತೆಯನ್ನು ದುರಸ್ತಿ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯವರು ಚಾಲಕನನ್ನು ನೇಮಕ ಮಾಡಿದರೇ ಈ ಮಾರ್ಗವಾಗಿ ಜನಮನ ವಾಹನ ಪ್ರಾರಂಭ ಮಾಡುತ್ತೇವೆ ಎಂದು ಇಡಿಸಿ ಅಧ್ಯಕ್ಷ ತೊಳಸಿಕೆರೆ ಕೆಂಪ್ಪಣ್ಣ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಸ್ವಾತಂತ್ರ್ಯ ಬಂದು 75 ವರ್ಷ ಕಳೆದು ಅಮೃತ ಮಹೋತ್ಸವ ಆಚರಿಸಿದರೂ ಇನ್ನೂ ಹಲವು ಗ್ರಾಮಗಳು ಮೂಲ ಸೌಕರ್ಯವನ್ನು ಕಂಡಿಲ್ಲ.

ಇದನ್ನೂ ಓದಿ : ರಸ್ತೆ ಇಲ್ಲದ ಕುಗ್ರಾಮ: ಸ್ಟ್ರೆಚರ್​​ನಲ್ಲೇ ಮೃತದೇಹ ಹೊತ್ತು ಸಾಗಿಸಿದ ಸಂಬಂಧಿಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.