ಚಾಮರಾಜನಗರ: ರಾಜಕೀಯ ಎಂದರೇ ಹಾಗೇ ನಿಗೂಢ, ಒಮ್ಮೆಗೆ ಅರ್ಥವಾಗದ, ಹತ್ತಾರು ಪ್ಲಾನ್ಗಳಿರುವ ಅಖಾಡ ಎಂಬುದಕ್ಕೆ ಇದೇ ನೋಡಿ ನಿದರ್ಶನ. ಅಪ್ಪ ಮೂರು ಬಾರಿ ಎಂಎಲ್ಎ ಆಗಿ ನಾಲ್ಕನೇ ಬಾರಿ ಕಣಕ್ಕಿಳಿಯುತ್ತಿದ್ದರೆ ಮಗ ಪಕ್ಷೇತರನಾಗಿ ನಾಮಿನೇಷನ್ ಸಲ್ಲಿಸಿದ್ದಾರೆ.
ಹೌದು.., ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ನರೇಂದ್ರ ಮಂಗಳವಾರ ನಾಮಿನೇಷನ್ ಸಲ್ಲಿಸಲಿದ್ದಾರೆ. ಆದರೆ, ಅವರ ಮಗ ನವನೀತ್ ಗೌಡ ಇಂದು ಪಕ್ಷೇತರನಾಗಿ ಉಮೇದುವಾರಿಕೆ ಸಲ್ಲಿಸುವ ಮೂಲಕ ಎದುರಾಳಿಗಳ ತಲೆಗೆ ಹುಳು ಬಿಟ್ಟಿದ್ದಾರೆ. ಈಗಾಗಲೇ ನರೇಂದ್ರ ಪರ ಮಗ ನವನೀತ್ ಬೆಟ್ಟಗುಡ್ಡ ಹತ್ತಿಳಿದು ಪ್ರಚಾರ ನಡೆಸಿದ್ದು ತಮ್ಮ ಕುಟುಂಬದ ಮತ ಬ್ಯಾಂಕ್ ಬೇರೆಯವರ ಪಾಲಾಗದಂತೆ ಎಚ್ಚರ ವಹಿಸಿದ್ದಾರೆ. ಆದರೆ, ಈ ನಡುವೆ ನವನೀತ್ ಗೌಡ ಪಕ್ಷೇತರನಾಗಿ ನಾಮಿನೇಷನ್ ಕೂಡ ಫೈಲ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ನಾಮಪತ್ರ ಸಲ್ಲಿಕೆಗೂ ಮುನ್ನ ದೇವೇಗೌಡರ ಆಶೀರ್ವಾದ ಪಡೆದ ನಿಖಿಲ್ ಕುಮಾರಸ್ವಾಮಿ
ಮಗನಿಗೆ ನಾಮಿನೇಷನ್ ಫೈಲ್ ಮಾಡಿಸುವ ಮೂಲಕ ಎಲೆಕ್ಷನ್ ಪಾಠವನ್ನು ಎಂಎಲ್ಎ ನರೇಂದ್ರ ಧಾರೆ ಎರೆಯುವ ಉದ್ದೇಶ ಇದೆ ಎನ್ನಲಾಗಿದೆ. ಇಲ್ಲವೇ, ಶುಭ ಮಹೂರ್ತ ಎಂದು ಮಗನಿಂದ ನಾಮಿನೇಷನ್ ಸಲ್ಲಿಸಿದರೋ, ಬೇರೆ ಏನೋ ರಣನೀತಿ ಇದೆಯೋ ಸದ್ಯಕ್ಕಂತೂ ಯಾವುದು ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಮಗ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಡೈರೆಕ್ಟರ್ಸ್ ಸ್ಪೆಷಲ್ : ಚುನಾವಣೆ ಬಂತು ಎಂದರೆ ಸಿನಿ ಮಂದಿ ತಮ್ಮಿಚ್ಚೆಯ ಪಕ್ಷ, ಮುಖಂಡರ ಪರ ಕ್ಯಾಂಪೇನ್ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಚಾಮರಾಜನಗರದಲ್ಲಿ ಇಬ್ಬರು ಡೈರೆಕ್ಟರ್ ಗಳು ಫುಲ್ ಆ್ಯಕ್ವೀವ್ ಆಗಿ ಪಕ್ಷಗಳಿಗೆ ಕೆಲಸ ಮಾಡುತ್ತಿದ್ದು ಜನರು ಗಮನ ಸೆಳೆದಿದೆ.
ಹೌದು, ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಸಚಿವ ಸೋಮಣ್ಣ ಪರ ಮಹೇಂದರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಪರವಾಗಿ ಎಸ್.ನಾರಾಯಣ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ಇಬ್ಬರು ಡೈರೆಕ್ಟರ್ ಗಳು ಇಬ್ಬರು ಅಭ್ಯರ್ಥಿಗಳಿಗೆ ಸಾಥ್ ನೀಡುತ್ತಿದ್ದಾರೆ. ಮತದಾರ ಈ ಇಬ್ಬರು ಡೈರಕ್ಟರ್ ಪ್ರಭಾವ ಬೀರುತ್ತಾರಾ ಅನ್ನೋದು ಫಲಿತಾಂಶದ ಬಳಿಕವೇ ಗೊತ್ತಾಗಬೇಕಿದೆ.
ಶಾಸಕ ಸಿ.ಪುಟ್ಟರಂಗಶೆಟ್ಟಿ ನಾಮಪತ್ರ ಸಲ್ಲಿಸುವ ವೇಳೆ ನಿರ್ದೇಶಕ ನಾರಾಯಣ್ ಕೂಡ ಜೊತೆಯಾಗಿದ್ದು, ಕಾಂಗ್ರೆಸ್ ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ, ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸುತ್ತು ಪ್ರಚಾರ ಕಾರ್ಯ ಮುಗಿಸಿ ಬಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನವರು ಜಗದೀಶ್ ಶೆಟ್ಟರ್ಗೆ ಸಿಎಂ ಇಲ್ಲ, ಪಿಎಂ ಮಾಡ್ತೀನಿ ಅಂದಿರಬಹುದು; ಬಿ ಸಿ ಪಾಟೀಲ್