ETV Bharat / state

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ : ಪ್ರಯಾಣಿಕರ ಪರದಾಟ

ಈ ಹೆದ್ದಾರಿಯ ಕಾಮಗಾರಿಗೆ 2017ರಲ್ಲಿಯೇ ಅಂದಿನ ಲೋಕೋಪಯೋಗಿ ಸಚಿವ ಹೆಚ್.ಸಿ.ಮಹಾದೇವಪ್ಪ ಚಾಲನೆ ನೀಡಿದ್ದರು. 1,330 ಕೋಟಿಯ ಈ ಗುತ್ತಿಗೆಯನ್ನು ಗುಜರಾತ್ ಮೂಲದ ಕಂಪನಿಯೊಂದು  ಪಡೆದುಕೊಂಡಿದ್ದು, ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಕಿಮೀ ರಸ್ತೆ ಹಾದುಹೋಗಲಿದೆ.

ಬೆಂಗಳೂರು-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ
author img

By

Published : Oct 10, 2019, 1:54 PM IST

ಚಾಮರಾಜನಗರ: ಬೆಂಗಳೂರು-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿಯು ಆಮೆ ಗತಿಯಲ್ಲಿ ಸಾಗುತ್ತಿರುವುದರಿಂದ ರಸ್ತೆಯಲ್ಲಿನ ಕಲ್ಲು ಮತ್ತು ತಗ್ಗುಗಳಿಂದ ಸಾರ್ವಜನಿಕರಿಗೆ ಹಿಂಸೆಯಾಗುತ್ತಿದೆ. ಸ್ವಲ್ಪ ಎಡಕ್ಕೆ ಹೋದರೆ ವಾಹನಗಳು ಹಳ್ಳಕ್ಕೆ ಬೀಳುತ್ತವೆ. ಹಾಗೆಯೇ ಸ್ವಲ್ಪ ಬಲಕ್ಕೆ ಬಂದರೆ ಹಿಂದಿನಿಂದ ಬರುವ ವಾಹನಗಳು ಡಿಕ್ಕಿಯಾಗುತ್ತವೆ. ಇದರ ಜೊತೆಗೆ ದಾರಿಯುದ್ದಕ್ಕೂ ಧೂಳು ಆವರಿಸಿರುತ್ತೆ.

ಬೆಂಗಳೂರು-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ

ಈ ಹೆದ್ದಾರಿಯ ಕಾಮಗಾರಿಗೆ 2017ರಲ್ಲಿಯೇ ಅಂದಿನ ಲೋಕೋಪಯೋಗಿ ಸಚಿವ ಹೆಚ್.ಸಿ.ಮಹಾದೇವಪ್ಪ ಚಾಲನೆ ನೀಡಿದ್ದರು. 1,330 ಕೋಟಿಯ ಈ ಗುತ್ತಿಗೆಯನ್ನು ಗುಜರಾತ್ ಮೂಲದ ಕಂಪನಿಯೊಂದು ಪಡೆದುಕೊಂಡಿದ್ದು, ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಕಿಮೀ ರಸ್ತೆ ಹಾದುಹೋಗಲಿದೆ. ಆದರೆ ಚಾಲನೆ ಸಿಕ್ಕಷ್ಟೇ ವೇಗವಾಗಿ ಕಾಮಗಾರಿ ನಡೆಯದ ಪರಿಣಾಮ ಪ್ರತಿದಿನವೂ ಬೈಕ್ ಸವಾರರು ಬಿದ್ದು ಗಾಯಗೊಳ್ಳುವ ಪ್ರಕರಣಗಳು ಸಂಭವಿಸುತ್ತಲೇ ಇವೆ.

ಕಳೆದ ಆಗಸ್ಟ್ ತಿಂಗಳು ರಸ್ತೆ ಸಮತಟ್ಟಿಲ್ಲದ ಕಾರಣ ಬೈಕ್ ಸವಾರನೊಬ್ಬ ಆಯತಪ್ಪಿ ಬಿದ್ದು ಸಾವನಪ್ಪಿದ್ದು, ಕಳೆದ ಕೆಲವೇ ತಿಂಗಳುಗಳಲ್ಲಿ ಈ ರಸ್ತೆಯಲ್ಲಿ ಐದಾರು ಜನರು ಮೃತಪಟ್ಟಿದ್ದಾರೆ.

ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಒಂದು ಭಾಗ ಹಳ್ಳ ಮಾಡಿ ಕಾಮಗಾರಿ ನಡೆಸದೇ ಹಾಗೇ ಬಿಟ್ಟಿದ್ದು, ವೇಗವಾಗಿ ಚಲಿಸುವ ಭಾರೀ ವಾಹನಗಳ ನಡುವೆ ಬೈಕ್ ಸವಾರರು ಪ್ರಯಾಸದಿಂದ ಚಾಲನೆ ಮಾಡಬೇಕಿದೆ. ಇನ್ನಾದರೂ ಸಂಸದ ವಿ.ಶ್ರೀನಿವಾಸ್​ಪ್ರಸಾದ್ ಕಾಳಜಿ ವಹಿಸಿ ಕಾಮಗಾರಿಯನ್ನು ತುರ್ತಾಗಿ ಮುಗಿಸುವಂತೆ ಮಾಡಬೇಕೆಂದು ಹೇಳುತ್ತಾರೆ ಸ್ಥಳೀಯರು.

Intro:ರಾ.ಹೆದ್ದಾರಿಯಲ್ಲಿ ವಾಹನ ಸವಾರರ ಸಾಹಸ: ಡರ್ಟ್ ಟ್ರಾಕ್ ರೇಸ್, ಹಿಲ್ ಕ್ಲೈಂಬ್ ಆಡಲು ಗಡಿಜಿಲ್ಲೆಗೆ ಬನ್ನಿ!

ಚಾಮರಾಜನಗರ: ಸ್ಕಿಡ್ ಆಗುವ ಕಲ್ಲು-ಮಣ್ಣಿನ ರಸ್ತೆಯಲ್ಲಿ ಬೈಕ್ ಓಡಿಸುವ ಗೇಮ್ ಆಡಿರುತ್ತೀರಿ, ಬಸ್ ನಿಧಾನಕ್ಕೆ ಏರುವ
ಹಿಲ್ ಕ್ಲೈಂಬ್ ಕೂಡ ನಿಮ್ಮ ಮೊಬೈಲ್ ನಲ್ಲಿ ಇರಬಹುದು, ಅಪಾಯಕಾರಿ ರಸ್ತೆಯಲ್ಲಿ ಯರ್ರಾಬಿರ್ರಿ ಓಡಿಸುವ ಮ್ಯಾಡ್ ಡ್ರೈವರ್ ಆಟವೂ ನಿಮಗೆ ಗೊತ್ತಿರಬಹುದು ಆದರೆ ಇವೆಲ್ಲವನ್ನೂ ನಿಜವಾಗಿ ಆಡಬೇಕೆಂದರೆ ಚಾಮರಾಜನಗರಕ್ಕೆ ನೀವು ಬರಲೇಬೇಕು.

Body:ಹೌದು, ಬೆಂಗಳೂರು-ಕೊಯಮತ್ತೂರು ರಾ.ಹೆದ್ದಾರಿ ವಿಳಂಬ ಕಾಮಗಾರಿಯಿಂದ ನೀವಾಡುವ ಗೇಮ್ ಗಳಂತೇ ಇಲ್ಲಿನ ಜನರು ವಾಹನ ಚಾಲನೆ ಮಾಡುತ್ತಿದ್ದಾರೆ. ಒಂದಿನಿತೂ ಎಡಕ್ಕೆ ಬಂದರೇ ಹಳ್ಳ ಬಲಕ್ಕೆ ಬಂದರೆ ಹಿಂದಿನಿಂದ ಬರುವ ವಾಹನ ಡಿಕ್ಕಿಯಾಗುವ ಅಪಾಯ, ಎದುರಿನಿಂದ ಬರುವ ವಾಹನಗಳಿಗೂ ಕೊಡಬೇಕು ಲಕ್ಷ್ಯ ಎಂಬ ದುಸ್ಥಿತಿಯನ್ನು ಆಮೆಗತಿಯ ರಾ‌.ಹೆದ್ದಾರಿ ಕಾಮಗಾರಿ ತಂದಿಟ್ಟಿದೆ.

ಬೆಂಗಳೂರು- ಕೊಯಮತ್ತೂರು ರಾ.ಹೆದ್ದಾರಿಗೆ 2017ರಲ್ಲಿ ಅಂದಿನ ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ಚಾಲನೆ ನೀಡಿದ್ದರು. 1330 ಕೋಟಿಯ ಗುತ್ತಿಗೆಯನ್ನು ಗುಜರಾತ್ ಮೂಲದ ಕಂಪನಿ ಪಡೆದುಕೊಂಡಿದ್ದು ಜಿಲ್ಲೆಯಲ್ಲಿ 70 ಕ್ಕೂ ಹೆಚ್ಚು ಕಿಮೀ ರಸ್ತೆ ಹಾದುಹೋಗಲಿದೆ. ಚಾಲನೆ ಸಿಕ್ಕಷ್ಟೇ ವೇಗವಾಗಿ ಕಾಮಗಾರಿ ನಡೆಯದ ಪರಿಣಾಮ ಪ್ರತಿದಿನವೂ ಬೈಕ್ ಸವಾರರು ಬಿದ್ದು ಗಾಯಗೊಳ್ಳುವ ಪ್ರಕರಣಗಳು ಸಂಭವಿಸುತ್ತಿವೆ.

ಕಳೆದ ಆಗಸ್ಟ್ ರಂದು ರಸ್ತೆ ಸಮತಟ್ಟಿಲ್ಲದ ಕಾರಣ ಆಯತಪ್ಪಿ ಬೈಕ್ ಸವಾರ ಬಿದ್ದು ಮೃತಪಟ್ಟಿದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆ ಗುತ್ತಿಗೆದಾರನ ವಿರುದ್ಧ ಎಫ್ಐಆರ್ ದಾಖಲು ಕೂಡ ಆಗಿದ್ದು ಈ ವರ್ಷದಲ್ಲೇ ಈ ಮಂದಗತಿಯ ಕಾಮಗಾರಿಯಿಂದ ೫ ಮಂದಿ ಮೃತಪಟ್ಟಿದ್ದಾರೆ.

ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಒಂದು ಭಾಗ ಹಳ್ಳ ಮಾಡಿ ಕಾಮಗಾರಿ ನಡೆಸದೇ ಹಾಗೇ ಬಿಟ್ಟಿದ್ದು ವೇಗವಾಗಿ ಚಲಿಸುವ ಭಾರೀ ವಾಹನಗಳ ನಡುವೆ ಬೈಕ್ ಸವಾರರು ಪ್ರಯಾಸದಿಂದ ಚಾಲನೆ ಮಾಡಬೇಕಿದೆ. ಸಂತೇಮರಹಳ್ಳಿಯಿಂದ ಚಾಮರಾಜನಗರಕ್ಕೆ ತೆರಳುವಾಗ ದಿನವೂ ಒಬ್ಬಿಬ್ಬರು ಬೈಕ್ ನಿಂದ ಬಿದ್ದು ಗಾಯಮಾಡಿಕೊಳ್ಳುತ್ತಾರೆ ಇನ್ನಾದರೂ ಸಂಸದ ವಿ.ಶ್ರೀನಿವಾಸಪ್ರಸಾದ್ ಕಾಳಜಿ ವಹಿಸಿ ರಾ.ಹೆದ್ದಾರಿ ಕಾಮಗಾರಿಯನ್ನು ತುರ್ತಾಗಿ ಮುಗಿಸಬೇಕು ಎಂದು ಒತ್ತಾಯಿಸುತ್ತಾರೆ ಸಂತೇಮರಹಳ್ಳಿಯ ಸುಭಾಷ್.

ಬೈಟ್೧- ಸುಭಾಷ್

ಕ್ರಮ ತೆಗೆದುಕೊಳ್ಳುವೆ: ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಸಂಸದ ವಿ.ಶ್ರೀನಿವಾಸಪ್ರಸಾದ್ ಪ್ರತಿಕ್ರಿಯಿಸಿ ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ದೂರು ನೀಡಿದ್ದಾರೆ, ಈ ಕುರಿತು ಹೆದ್ದಾರಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

Conclusion:ಪೊಲೀಸ್ ಇಲಾಖೆಯೂ ಕೂಡ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು, ಲಾರಿಗಳು ಮಂದಗತಿಯಲ್ಲಿ ಚಲಿಸುವಂತೆ ಸೂಚಿಸಬೇಕಿದ್ದು ಸಂಬಂಧಪಟ್ಟ ಅಧಿಕಾರಿಗಳು ರಾ.ಹೆದ್ದಾರಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸೂಚಿಸಬೇಕಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.