ETV Bharat / state

'ಇಚ್ಛೆಪಟ್ಟ ಯುವಕ ಬಿಟ್ಟು ಬೇರೆ ಯಾರೂ ತಾಳಿ ಕಟ್ಟದಿರಲಿ': ಹುಂಡಿಯಲ್ಲಿ ಸಿಕ್ತು ಯುವತಿಯ ಪತ್ರ!

ಮುಕ್ಕಡಹಳ್ಳಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಯುವತಿಯೊಬ್ಬಳು ಬರೆದ ವಿಭಿನ್ನ ಹರಕೆ ಪತ್ರ ಗಮನ ಸೆಳೆಯಿತು.

girl wrote a letter to god
Hundi counting function of Mayamma Devamma temple
author img

By

Published : Dec 30, 2022, 7:09 PM IST

Updated : Dec 30, 2022, 7:18 PM IST

ಮಾಯಮ್ಮ ದೇವಮ್ಮ ದೇವಾಲಯದ ಹುಂಡಿ ಎಣಿಕೆ ಕಾರ್ಯ

ಚಾಮರಾಜನಗರ: ದೇವರಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿ ಭಕ್ತರು ವಿವಿಧ ರೀತಿಯ ಹರಕೆ ಹೊತ್ತುಕೊಂಡು ಹುಂಡಿಗೆ ಪತ್ರಗಳನ್ನು ಹಾಕುತ್ತಾರೆ. ಇದೇ ರೀತಿ, ಯುವತಿಯೊಬ್ಬಳು ತಾನು ಇಚ್ಛೆಪಟ್ಟ ಯುವಕ ಸಿಗಲೆಂದು ದೇವರ ಹುಂಡಿಗೆ ಪತ್ರ ಹಾಕಿ ಬೇಡಿಕೊಂಡಿದ್ದಾಳೆ. ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಗ್ರಾಮದ ಮಾಯಮ್ಮ ದೇವಮ್ಮ ದೇವಾಲಯದಲ್ಲಿ ಇಂದು ಹುಂಡಿ ಎಣಿಕೆ ಮಾಡುವಾಗ ಇಂಥದ್ದೊಂದು ಪತ್ರ ಸಿಕ್ಕಿತು. 'ದೇವರೇ, ನನ್ನ ಮೂರ್ತಿಯನ್ನು ಬಿಟ್ಟು ಯಾರೂ ನನ್ನ ಕುತ್ತಿಗೆಗೆ ತಾಳಿ ಕಟ್ಟಬಾರದು' ಎಂದು ಆಕೆ ಬರೆದಿದ್ದಾಳೆ.

ಕೆಲವು ದಿನಗಳ ಹಿಂದಷ್ಟೇ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆದಿದ್ದಾಗ ಪತ್ರಗಳು, ಆಹ್ವಾನ ಪತ್ರಿಕೆಗಳು ಕೂಡ ದೊರೆತಿದ್ದವು. ಇತ್ತೀಚೆಗೆ ಯುವಕನೋರ್ವ ತನಗೆ ಹುಡುಗಿ ಕರುಣಿಸು ಪ್ರೀತಿಯ ದೇವರೇ ಎಂದು ಶಿವಲಿಂಗದ ಚಿತ್ರ ಬರೆದು ಹುಂಡಿಗೆ ಹಾಕಿ ಪ್ರಾರ್ಥಿಸಿದ್ದ. ಯುವತಿಯ ಭಾವಚಿತ್ರ, ಆಹ್ವಾನ ಪತ್ರಿಕೆಗಳೂ ಕೂಡ ಹುಂಡಿಯಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: ಚಾಮರಾಜನಗರ: ಹುಡುಗಿ ಕರುಣಿಸಿ ಎಂದು ದೇವರಿಗೇ ಪತ್ರ ಬರೆದ ಭೂಪ!

Last Updated : Dec 30, 2022, 7:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.