ಚಾಮರಾಜನಗರ: ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಿನ ಕೆಸರೆರಚಾಟ ಹೊಸದೇನಲ್ಲ ಎಂದು ಸಿದ್ದರಾಮಯ್ಯ ಮತ್ತು ದೇವೇಗೌಡರ ಆರೋಪ-ಪ್ರತ್ಯಾರೋಪ ಕುರಿತು ಸಂಸದ ವಿ.ಶ್ರೀನಿವಾಸಪ್ರಸಾದ್ ಟೀಕಿಸಿದರು.
ಹನೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ವಿಧಾನಸಭೆ ಚುನಾವಣೆಗೂ ಮುನ್ನ ಇಬ್ಬರು ಕಿತ್ತಾಡಿ ಬಳಿಕ ದೋಸ್ತಿ ಸರ್ಕಾರ ರಚನೆ ಮಾಡಿದ್ದರು. ಮಾನಸಿಕವಾಗಿ ಒಂದಾಗದೇ ಲೋಕಸಭೆ ಚುನಾವಣೆಯಲ್ಲಿ ನೆಲಕಚ್ಚಿದರು. ದೇವೆಗೌಡರು ಕನ್ನಿಂಗ್ ಪೊಲಿಟೀಷಿಯನ್. ಅಷ್ಟು ಹಿರಿಯರಾದರೂ ಹೊರಗೊಂದು ಒಳಗೊಂದಿದ್ದು, ಮನಸ್ಸು ಬಿಚ್ಚಿ ಮಾತನಾಡುವುದಿಲ್ಲ. ಕುಮಾರಸ್ವಾಮಿ, ರೇವಣ್ಣನದ್ದು ಸರ್ವಾಧಿಕಾರಿ ಧೋರಣೆ. ಸೋತ ಮೇಲೆ ಎಲ್ಲಾ ಬಯಲಿಗೆ ಬಂದಿದೆ ಎಂದರು.
ಇದೇ ವೇಳೆ ಸಂಪುಟ ರಚನೆ ಬಳಿಕ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ವಿರೋಧ ಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದರು. ಇನ್ನು, ಕುಸಿದರುವ ಆರ್ಥಿಕ ಪರಿಸ್ಥಿತಿ ಕುರಿತು ಮಾತನಾಡಿ, ಆತಂಕ ಪಡುವ ಅಗತ್ಯವಿಲ್ಲ. ಎಲ್ಲವೂ ಸರಿ ಹೋಗಲಿದ್ದು, ಬಿಜೆಪಿ ಸರ್ಕಾರ ಸುಭದ್ರ ಆಡಳಿತ ನೀಡಲಿದೆ ಎಂದರು.