ಚಾಮರಾಜನಗರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಅಕ್ರಮ ಸಂಪತ್ತಿನ ಪ್ರದರ್ಶನ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಮೇಕೆದಾಟು ಪಾದಯಾತ್ರೆ ಅಪಹಾಸ್ಯದ ಯಾತ್ರೆ, ಅಕ್ರಮ ಸಂಪತ್ತಿನ ಪ್ರದರ್ಶನ ಆಗುತ್ತಿದೆ. ಒಬ್ಬ ವ್ಯಕ್ತಿಯ ಪ್ರಚಾರಕ್ಕೆ ಇದನ್ನು ಮಾಡಲಾಗುತ್ತಿದೆ. ಬಾಡೂಟ, ಉಚಿತ ವಾಹನ, ಪೆಟ್ರೋಲ್ ಇದಾ ಪಾದಯಾತ್ರೆ ಮಾಡೋದು, ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದರು.
ಒಂದು ಗುಂಪು ಬೀದಿಯಲ್ಲಿ ಕಿರುಚಾಡಿಕೊಂಡು ಬಂದರೆ ಅರ್ಥ ಇದೆಯಾ, ಇಷ್ಟು ವರ್ಷ ಇಲ್ಲದಿರುವುದು ಈಗ ಯಾಕೆ?, ಯೋಜನೆಗೆ ರಾಜ್ಯದಲ್ಲಿ ತಾರಿಂದಲ್ಲೂ ವಿರೋಧವೂ ಇಲ್ಲ. ತಮಿಳುನಾಡು ಕ್ಯಾತೆ ತೆಗೆದಿದೆಯಷ್ಟೇ, ಪಾದಯಾತ್ರೆಯಿಂದ ಏನು ಪ್ರಯೋಜನವಿಲ್ಲ. ಪಾದಯಾತ್ರೆಯೇ ಪರಿಹಾರವಲ್ಲ ಎಂದು ಹೇಳಿದರು. ಪಾದಯಾತ್ರೆ ಮಾಡುವ ಬದಲು ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಪಿಎಂ ಭೇಟಿ ಮಾಡಲಿ ಎಂದು ಇದೇ ವೇಳೆ ಅವರು ಸಲಹೆ ನೀಡಿದರು.
ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆ ಬಹುದೊಡ್ಡ ಚಾಲೆಂಜ್ : ಪ್ರಲ್ಹಾದ್ ಜೋಶಿ