ETV Bharat / state

ಮಾಜಿ ಶಾಸಕರ ಮನೆಯಲ್ಲಿ ಮಡುಗಟ್ಟಿದ ಶೋಕ.. ತಾಯಿ ಸಂಸ್ಕಾರಕ್ಕೆ ಬಂದ ಮಗನಿಗೆ ಹೃದಯಾಘಾತ - Mourning in the house of former legislator

ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರ ಅತ್ತೆ ಸರೋಜಮ್ಮ(76) ಶುಕ್ರವಾರ ರಾತ್ರಿ ಕೊರೊನಾಗೆ ಮೃತಪಟ್ಟಿದ್ದರು. ತಾಯಿಯನ್ನು ಕೊನೆ ಬಾರಿಗೆ ಕಾಣಲು ಬೆಂಗಳೂರಿನಿಂದ ಬಂದಿದ್ದ ಮಗ ಸುರೇಶ್ ಕುಮಾರ್ (53) ಕೂಡ ಅಂತ್ಯಕ್ರಿಯೆ ನಡೆಯುವ ಜಾಗದಿಂದ ಸ್ವಲ್ಪ ದೂರದಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದಾರೆ.

ತಾಯಿ, ಮಗನ ಸಾವು
ತಾಯಿ, ಮಗನ ಸಾವು
author img

By

Published : May 15, 2021, 8:32 PM IST

Updated : May 15, 2021, 8:42 PM IST

ಚಾಮರಾಜನಗರ: ಕೊರೊನಾಗೆ ಬಲಿಯಾದ ತಾಯಿಯನ್ನು ಕೊನೆಯ ಬಾರಿಗೆ ನೋಡಲೆಂದು ಬಂದ ಮಗನೂ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಚಾಮರಾಜನಗರ ತಾಲೂಕಿನ ಹುರುಳಿನಂಜನಪುರ ಗ್ರಾಮದಲ್ಲಿ ನಡೆದಿದೆ.

ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರ ಅತ್ತೆ ಸರೋಜಮ್ಮ(76) ಶುಕ್ರವಾರ ರಾತ್ರಿ ಕೊರೊನಾಗೆ ಮೃತಪಟ್ಟಿದ್ದರು. ತಾಯಿಯನ್ನು ಕೊನೆಬಾರಿಗೆ ಕಾಣಲು ಬೆಂಗಳೂರಿನಿಂದ ಬಂದಿದ್ದ ಮಗ ಸುರೇಶ್ ಕುಮಾರ್ (53) ಕೂಡ ಅಂತ್ಯಕ್ರಿಯೆ ನಡೆಯುವ ಜಾಗದಿಂದ ಸ್ವಲ್ಪ ದೂರದಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದಾರೆ.

ಸದ್ಯ, ಮಾಜಿ ಶಾಸಕರ ಮನೆಯಲ್ಲಿ ಶೋಕ ಮನೆ ಮಾಡಿದ್ದು, ತಾಯಿ - ಮಗ ಇಬ್ಬರೂ ಒಂದೇ ದಿನ ಬಲಿಯಾಗಿ ವಾತಾವರಣವನ್ನೇ ನೀರವ ಮೌನವನ್ನಾಗಿಸಿದ್ದಾರೆ.

Last Updated : May 15, 2021, 8:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.