ಚಾಮರಾಜನಗರ: ಜಿಲ್ಲೆಯ ಕೊರೊನಾ ರಿಪೋರ್ಟ್ ಇಂದು ಬಂದಿದ್ದು ಸೋಂಕಿತರ ಸಂಖ್ಯೆ 55ಕ್ಕೇರಿಕೆಯಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್ ಕುಮಾರ್ ಅವರ ಕಾರು ಚಾಲಕನಿಗೂ ಕೊರೊನಾ ತಗುಲಿದ್ದು, ಎಸ್ಪಿ ಹೋಂ ಕ್ವಾರಂಟೈನ್ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಹಿಂದೆ ಲ್ಯಾಬ್ ಟೆಕ್ನೀಶಿಯನ್ಗೆ ಸೋಂಕು ತಗುಲಿ ಆತಂಕ ಸೃಷ್ಟಿಸಿತ್ತು.
ಇಂದು ಪತ್ತೆಯಾದ 22 ಸೋಂಕಿತರಲ್ಲಿ ಬರೋಬ್ಬರಿ 19 ಮಂದಿ ಗುಂಡ್ಲುಪೇಟೆಯವರಾಗಿದ್ದು, ಮೂರು ಮಂದಿ ಚಾಮರಾಜನಗರ ಜಿಲ್ಲೆಗೆ ಒಳಪಟ್ಟವರು. ಸಂಜೆ ವೇಳೆಗೆ 22 ಸೋಂಕಿತರ ಟ್ರಾವೆಲ್ ಹಿಸ್ಟರಿಯ ನಿಖರ ಮಾಹಿತಿ ತಿಳಿದುಬರಲಿದೆ.