ETV Bharat / state

ಶ್ರೀ ಮಲೆಮಹದೇಶ್ವರನಿಗೆ 28 ದಿನದಲ್ಲಿ  ಕಾಣಿಕೆ ರೂಪದಲ್ಲಿ ಬಂತು ₹2.83 ಕೋಟಿ - ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ

ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದು, 2.83 ಕೋಟಿ ರೂ. ಹಣ ಸಂಗ್ರಹವಾಗಿದೆ..

More than 2 crore collected in Chamarajanagar Male Mahadeshwara Temple
ಮಲೆಮಹದೇಶ್ವರ ಬೆಟ್ಟದಲ್ಲಿ ಎರಡು ಕೋಟಿ ಅಧಿಕ ಕಾಣಿಕೆ ಸಂಗ್ರಹ
author img

By

Published : Mar 12, 2022, 9:31 AM IST

ಚಾಮರಾಜನಗರ : ಹನೂರು ತಾಲೂಕಿನ ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ ಅತ್ಯಲ್ಪ ಅವಧಿಯಲ್ಲಿ ಭಾರೀ ಮೊತ್ತದ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ.

ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ ಎರಡು ಕೋಟಿಗೂ ಅಧಿಕ ಕಾಣಿಕೆ ಸಂಗ್ರಹ

ಶುಕ್ರವಾರ ಬೆಳಗ್ಗೆಯಿಂದ ತಡರಾತ್ರಿವರೆಗೂ ಹುಂಡಿ ಎಣಿಕೆ ನಡೆದಿದ್ದು, ಬರೋಬ್ಬರಿ 2.83 ಕೋಟಿ ರೂ‌. ಹಣ ಸಂಗ್ರಹವಾಗಿದೆ‌. ಇದರಲ್ಲಿ ನಾಣ್ಯವೇ 16 ಲಕ್ಷ ರೂ. ದಷ್ಟಿದೆ. ಜೊತೆಗೆ 3.8 ಕೆಜಿ ಬೆಳ್ಳಿ ಹಾಗೂ 73 ಗ್ರಾಂ ಚಿನ್ನವನ್ನು ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ‌.

ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಗ್ರಹವಾಗಿರುವುದರಲ್ಲಿ ಇದೇ ಅತಿ ಹೆಚ್ಚಿನದ್ದಾಗಿದೆ. ಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ ಇಷ್ಟೊಂದು ಭಾರಿ ಮೊತ್ತ ಸಂಗ್ರಹವಾಗಿದೆ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕುಡಿಯುವ ನೀರಿಗೆ ನಿಲ್ಲದ ಹಾಹಾಕಾರ: 55 ಅಡಿ ಬಾವಿ ತೋಡಿದ ದಂಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.