ETV Bharat / state

ಬೆಲೆ ಏರಿಕೆಯಿಂದ ಒಲವು ಕಡಿಮೆಯಾಗಿಲ್ಲ, ಮೋದಿ ಅವರೇ ಇಂದಿಗೂ ಹೀರೋ: ಶೋಭಾ ಕರಂದ್ಲಾಜೆ - 2023ಕ್ಕೆ ವಿಶ್ವ ಸಿರಿಧಾನ್ಯಗಳ ವರ್ಷ

ದೆಹಲಿ ಗಡಿಯಲ್ಲಿ ರೈತರ ನೂತನ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವವರು ರೈತರಲ್ಲ ಎಪಿಎಂಸಿಯ ದಲ್ಲಾಳಿಗಳು, ಸುಧಾರಿತ ಕಾನೂನುಗಳಿಂದ ದಲ್ಲಾಳಿಗಳಿಗೆ ಲಾಭ ದಕ್ಕದಿರುವುದರಿಂದ ಪ್ರತಿಭಟಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

Modi is still a hero: Shobha Karandlaje
ಶೋಭಾ ಕರಂದ್ಲಾಜೆ
author img

By

Published : Aug 16, 2021, 10:21 PM IST

ಚಾಮರಾಜನಗರ: ನರೇಂದ್ರ ಮೋದಿ ಅವರಿಗೆ ಸರಿಸಾಟಿಯಾದ ವ್ಯಕ್ತಿ ಬೇರೋಬ್ಬರಿಲ್ಲ.ಅವರೇ ಇಂದಿಗೂ ಹೀರೋ, ಅಭಿವೃದ್ಧಿಯ ಹರಿಕಾರ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಣ್ಣಿಸಿದರು.

ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಬೆಲೆ ಏರಿಕೆಯಿಂದ ಸರ್ಕಾರದ ಮೇಲಿನ ಜನರ ಒಲವು ಕಡಿಮೆಯಾಗಿಲ್ಲವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ನೀಡದಂತಹ ಕಾರ್ಯಕ್ರಮಗಳನ್ನು ಮೋದಿ ನೇತೃತ್ವದ ಸರ್ಕಾರ ನೀಡುತ್ತಿದೆ, ಅವರಿಗೆ ಸರಿಸಾಟಿಯಾದ ವ್ಯಕ್ತಿ ಇಲ್ಲ, ಅವರು ಈಗಲೂ ಹೀರೋ ಎಂದು ಅಭಿಪ್ರಾಯಪಟ್ಟರು.

ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ದಲ್ಲಾಳಿಗಳು:

ದೆಹಲಿ ಗಡಿಯಲ್ಲಿ ರೈತರ ನೂತನ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವವರು ರೈತರಲ್ಲ ಎಪಿಎಂಸಿಯ ದಲ್ಲಾಳಿಗಳು, ಸುಧಾರಿತ ಕಾನೂಗಳಿಂದ ದಲ್ಲಾಳಿಗಳಿಗೆ ಲಾಭ ದಕ್ಕದಿರುವುದರಿಂದ ಪ್ರತಿಭಟಿಸುತ್ತಿದ್ದಾರೆ, ಕೃಷಿ ಕಾಯ್ದೆ ವಿರುದ್ಧ ರಾಜ್ಯದಲ್ಲಿ ಹೋರಾಟ ಮಾಡುತ್ತಿರುವುದು ರಾಜಕೀಯ ಪ್ರೇರಿತ ಎಂದು ರೈತರ ವಿರುದ್ಧ ಕಿಡಿಕಾರಿದರು.

ಸಮಗ್ರ ಕೃಷಿಯಿಂದ ಲಾಭ:

ಸುದ್ದಿಗೋಷ್ಠಿಗೂ ಮುನ್ನ ಜನಾಶೀರ್ವಾದ ಯಾತ್ರೆಯಲ್ಲಿ ಶೋಭಾ ಕರಂದ್ಲಾಜೆ ಮಾತನಾಡಿ, ಸಮಗ್ರ ಕೃಷಿಯಿಂದ ರೈತರು ಲಾಭ ಪಡೆಯಲು ಸಾಧ್ಯ, ಒಂದು ಬೆಳೆ ಕೈ ಕೊಟ್ಟರೆ ಮತ್ತೊಂದರಲ್ಲಿ ಬೆಲೆ ಸಿಗಲಿದೆ. ಅಧ್ಯಯನಗಳ ಪ್ರಕಾರ ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಏಕ ಬೆಲೆ ಆಶ್ರಯಿಸಿದ ರೈತರ ಸಂಖ್ಯೆಯೇ ಹೆಚ್ಚಿದೆ ಎಂದರು.

ಶೋಭಾ ಕರಂದ್ಲಾಜೆ

ವ್ಯವಸಾಯದೊಟ್ಟಿಗೆ ಮೀನುಗಾರಿಕೆ, ಕುಕ್ಕುಟೋದ್ಯಮ, ಹೈನುಗಾರಿಕೆ ಕಸುಬುಗಳು ಪೂರಕವಾಗಿದ್ದು, ರೈತರು ಇವುಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ, ಸಿರಿಧಾನ್ಯಗಳನ್ನು ಬೆಳೆಯಲು ರೈತರು ಮುಂದಾಗಬೇಕು, ಸಿರಿಧಾನ್ಯಗಳಿಗೆ ಅತಿ ಹೆಚ್ಚು ಬೇಡಿಕೆ ಇದೆ, ಪ್ರಧಾನಿ ಅವರ ಒತ್ತಾಸೆಯಿಂದಾಗಿ

2023ಕ್ಕೆ ವಿಶ್ವ ಸಿರಿಧಾನ್ಯಗಳ ವರ್ಷ ಎಂದು ವಿಶ್ವಸಂಸ್ಥೆ ಘೋಷಿಸಲಿದೆ ಎಂದು ಅವರು ತಿಳಿಸಿದರು. ಕ್ರಿಮಿನಾಶಕಗಳನ್ನು ಯಾವ ಪ್ರಮಾಣದಲ್ಲಿ, ಯಾವ ಸಂದರ್ಭದಲ್ಲಿ ಬಳಸಬೇಕೆಂಬುದನ್ನು ರೈತರು ಅರಿಯಬೇಕು. ಕ್ರಿಮಿನಾಶಕ ಕಡಿಮೆ ಉಪಯೋಗಿಸಿದಷ್ಟು ಬೇರೆ ದೇಶಗಳಿಗೆ ರಫ್ತು ಮಾಡಲು ನೆರವಾಗುತ್ತದೆ. ಅದೇ ರೀತಿ, ಖಾದ್ಯ ತೈಲದಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದರು.

ಕರ್ನಾಟಕದಲಿ ಕಠಿಣ ಕಾನೂನು:

ದೇಶದಲ್ಲೇ ಅರಣ್ಯಕ್ಕೆ ಸಂಬಂಧಿಸಿದ ಕಠಿಣ ಕಾನೂನುಗಳು ರಾಜ್ಯದಲ್ಲಿದೆ. ಸ್ವಂತ ಹಣದಿಂದ ಸ್ವಂತ ಜಾಗದಲ್ಲಿ ಅರಣ್ಯ ಕೃಷಿ ಮಾಡಿದರೂ ಮರಗಳನ್ನು ಕತ್ತರಿಸಲು ರೈತರಿಗೆ ಅವಕಾಶವಿಲ್ಲದ ಪರಿಸ್ಥಿತಿ ಇದೆ. ಅರಣ್ಯ ಕೃಷಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಾಯ್ದೆ ತಿದ್ದುಪಡಿಗಳಾಗುತ್ತಿದ್ದು, ರಾಜ್ಯದ ರೈತರು ಇದರ ಸದುಪಯೋಗ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ರೈತರ ಸಣ್ಣ ಗುಂಪುಗಳಿಂದ ಕಾರ್ಪೋರೇಟ್ ಕಂಪನಿ ಕಾನೂನಡಿ ಕೃಷಿ ಉತ್ಪಾದಕ ಸಂಸ್ಥೆಗಳನ್ನು ರಚಿಸಿ ಆದಾಯವನ್ನು ದ್ವಿಗುಣ ಮಾಡಿಕೊಳ್ಳಬಹುದಾಗಿದೆ. ಕೃಷಿ ವಿಕಾಸ ಯೋಜನೆಯನ್ನು ರೈತರಿಗೆ ತಲುಪಿಸುವ ಕೆಲಸವಾಗುತ್ತಿದೆ. ಸಹಕಾರ ಕ್ಷೇತ್ರವನ್ನು ರೈತರು ಕಡೆಗಣಿಸಬಾರದು ಕೇಂದ್ರದ ಗೃಹ ಸಚಿವರಾದರೂ ಇಂದಿಗೂ ಅಮಿತ್ ಶಾ ಅವರೂರಿನ ಸಹಕಾರ ಸಂಘದ ಸದಸ್ಯರಾಗಿದ್ದಾರೆ ಎಂದು ತಿಳಿಸಿದರು.

ಗೋ ಪೂಜೆ- ಗೋ ಸ್ಮರಣಿಕೆ:

ಕಾರ್ಯಕ್ರಮದ ಆರಂಭಕ್ಕೂ ಮುನ್ನ ಸಚಿವರು ಗೋ ಪೂಜೆ ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಬರ ಪರಿಹಾರ ನಿಗಮದ ಅಧ್ಯಕ್ಷ ರಾಮಚಂದ್ರು "ಕಾಮಧೇನು" ಸ್ಮರಣಿಕೆ ನೀಡಿ ಗೌರವಿಸಿದ್ದು, ವಿಶೇಷವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.