ಚಾಮರಾಜನಗರ : ಬಿಜೆಪಿಗೆ ಸೇರ್ಪಡೆಯಾಗುತ್ತೇನೆಂದು ಘೋಷಿಸಿದ ಬೆನ್ನಲ್ಲೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಹಳೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರೋಲರ್ಸ್ಗಳಿಗೆ ಆಹಾರವಾಗುತ್ತಿದೆ.
2018ರಲ್ಲಿ ಕೊಳ್ಳೇಗಾಲದ ಅಸಿಸಿ ಚರ್ಚಿನಲ್ಲಿ ವಿಧಾನಸಭಾ ಚುನಾವಣೆಯ ಗೆಲುವಿಗಾಗಿ ಪ್ರಾರ್ಥನೆ ನಡೆಸಿದ ವೇಳೆ, 'ನಾನು ಕೆಲಸ ಮಾಡಿರುವುದಕ್ಕೆ ಬೆಲೆ ಇಲ್ಲವೇ, ಓ ಲಾರ್ಡ್, ಜೀಸಸ್ ಪ್ಲೀಸ್ ಹೆಲ್ಪ್ ಮಿ' ಎಂದು ಗೋಳಾಡುವ 25 ಸೆಕೆಂಡ್ಗಳ ವಿಡಿಯೋ ಇದಾಗಿದ್ದು, ಸದ್ಯ ವೈರಲ್ ಆಗುತ್ತಿದೆ. ಶಾಸಕರು ಬಿಜೆಪಿಗೆ ಹೋಗುತ್ತಿರುವುದನ್ನು ವಿರೋಧಿಗಳು ಟೀಕಿಸಿದರೇ, ಟ್ರೋಲ್ ಪೇಜ್ಗಳು ಹಾಸ್ಯ ಮಾಡುತ್ತಿವೆ.
ಅಂಬೇಡ್ಕರ್ ವಾದಿ ಎಂದು ಹೇಳಿಕೊಳ್ಳುತ್ತಿದ್ದ ಮಹೇಶ್ ಚೀರಾಟ ನೋಡಿ, ಡ್ರಾಮಾ, ಮೂವಿ ಹೀರೋ, ವ್ಯಕ್ತಿಯನ್ನು ರಾಜಕಾರಣ ಎಷ್ಟು ದುರ್ಬಲ ಮಾಡುತ್ತದೆ ಎಂಬುದಕ್ಕೆ ಸಾಕ್ಷಿ, ಪಾಪಾ ಹೆಲ್ಪ್ ಮಾಡಿ, ಇವರು ಕ್ರೈಸ್ತರಾ, ಹೀಗೆ ಹಲವಾರು ಕಮೆಂಟ್ ಮಾಡಿ ನೆಟ್ಟಿಗರು ಕಾಲೆಳೆದಿದ್ದಾರೆ.