ETV Bharat / state

ಚಾಮರಾಜನಗರ ಜಿಲ್ಲಾ ದಸರಾಗೆ ಶಾಸಕ ಸಿ‌. ಪುಟ್ಟರಂಗಶೆಟ್ಟಿ ಚಾಲನೆ - ಚಾಮರಾಜೇಶ್ವರಸ್ವಾಮಿ ದೇಗುಲ

ಚಾಮರಾಜನಗರ ಜಿಲ್ಲಾ ದಸರಾಗೆ ಶಾಸಕ ಸಿ‌ .ಪುಟ್ಟರಂಗಶೆಟ್ಟಿ ಅವರು ಚಾಮರಾಜೇಶ್ವರಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಚಾಲನೆ ಕೊಟ್ಟರು. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಕಾರ್ಯಕ್ರಮಕ್ಕೆ ಗೈರಾಗಿದ್ದರು.

mla c puttarangashetty gave drive to chamarajanagara dasara
ಚಾಮರಾಜನಗರ ಜಿಲ್ಲಾ ದಸರಾಗೆ ಶಾಸಕ ಸಿ‌. ಪುಟ್ಟರಂಗಶೆಟ್ಟಿಯಿಂದ ಚಾಲನೆ
author img

By

Published : Oct 7, 2021, 3:41 PM IST

ಚಾಮರಾಜನಗರ: 4 ದಿನದ ಚಾಮರಾಜನಗರ ಜಿಲ್ಲಾ ದಸರಾಗೆ ಇಂದು ಶಾಸಕ ಸಿ‌.ಪುಟ್ಟರಂಗಶೆಟ್ಟಿ ಅವರು ಚಾಮರಾಜೇಶ್ವರಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಚಾಮರಾಜನಗರ ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಸಹಯೋಗದೊಂದಿಗೆ ನಡೆಯುವ 4 ದಿನದ ಜಿಲ್ಲಾ ದಸರಾಗೆ ಉಸ್ತುವಾರಿ ಸಚಿವ ಸೋಮಶೇಖರ್ ಅವರ ಅನುಪಸ್ಥಿತಿಯಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ, ಉತ್ಸವ ಮೂರ್ತಿ ಮುಂಭಾಗ ದೀಪ ಬೆಳಗಿಸಿ, ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು.

ಚಾಮರಾಜನಗರ ಜಿಲ್ಲಾ ದಸರಾಗೆ ಶಾಸಕ ಸಿ‌. ಪುಟ್ಟರಂಗಶೆಟ್ಟಿಯಿಂದ ಚಾಲನೆ

ಬಳಿಕ ಅವರು ಮಾತನಾಡಿದ ಶಾಸಕರು, ಜಿಲ್ಲೆ ಸೇರಿದಂತೆ ರಾಜ್ಯ ಸುಭಿಕ್ಷವಾಗಿರಲೆಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಕೊರೊನಾ ಮಹಾಮಾರಿ ಆದಷ್ಟು ಬೇಗ ತೊಲಗಿ ಮುಂದಿನ ವರ್ಷಗಳಿಂದ ಹಬ್ಬ- ಹರಿದಿನಗಳನ್ನು, ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸುವ ಸೌಭಾಗ್ಯ ಆ ದೇವರು ಕೊಡಲೆಂದು ಆಶಿಸಿದರು.

ಇಂದು ಸಂಜೆ 5.30ಕ್ಕೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.

ಇದನ್ನೂ ಓದಿ: ಅರಮನೆಯಲ್ಲಿ ಶರನ್ನವರಾತ್ರಿ ಸಂಭ್ರಮ: ರಾಜ ವಂಶಸ್ಥರಿಂದ ಖಾಸಗಿ ದರ್ಬಾರ್

ಈ ವೇಳೆ ನಂದಿಧ್ವಜ, ಗೊರವರ ಕುಣಿತ, ಹುಲಿ ವೇಷ, ವೀರಗಾಸೆ, ಗಾರುಡಿಗೊಂಬೆ,‌ ಮಂಗಳವಾದ್ಯಗಳು ಗಮನ ಸೆಳೆದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.