ಚಾಮರಾಜನಗರ: ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಇದೇ ಜನವರಿ 23 ರಂದು ಗುಂಡ್ಲುಪೇಟೆ ತಾಲೂಕಿನ ಬರಗಿಯಲ್ಲಿ 'ರೈತರೊಂದಿಗೆ ಒಂದು ದಿನ' ಕಾರ್ಯಕ್ರಮ ನಡೆಸಲಿದ್ದಾರೆ.
ರೈತರೊಂದಿಗೆ ಒಂದು ದಿನ ಕಾರ್ಯಕ್ರಮವು ವೈಶಿಷ್ಟ್ಯ ಪೂರ್ಣವಾಗಿದ್ದು, ಕೃಷಿ ಕ್ಷೇತ್ರದ ಸಮಗ್ರ ಪದ್ಧತಿ, ಪ್ರಾತ್ಯಕ್ಷಿಕೆಗಳು, ವಿಶೇಷ ಉಪನ್ಯಾಸ, ವಸ್ತು ಪ್ರದರ್ಶನ ಸೇರಿದಂತೆ ಹಲವು ಕೃಷಿ ಸಂಬಂಧಿತ ಚಟುವಟಿಕೆಗಳು ಅಂದು ನಡೆಯಲಿವೆ. ಇದೇ 23ರ ಬೆಳಗ್ಗೆ ಬರಗಿ ಗ್ರಾಮದ ವ್ಯಾಪ್ತಿಯಲ್ಲಿರುವ ರೈತರಾದ ರಾಜಶೇಖರ್ ಅವರ ಜಮೀನಿನಲ್ಲಿ ನಾನಾ ಸಮಗ್ರ ಕೃಷಿ ಚಟುವಟಿಕೆಗಳನ್ನು ಸಚಿವ ಬಿ.ಸಿ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ನಡೆಸಲಿದ್ದಾರೆ.
ಈ ಸುದ್ದಿಯನ್ನೂ ಓದಿ: ರಾಮದುರ್ಗ: ಪುಟ್ಟ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ದಂಪತಿ!
ಉಳುಮೆ, ಬಿತ್ತನೆ, ಕೃಷಿ ಹೊಂಡಕ್ಕೆ ಮೀನುಮರಿ ಬಿಡುವುದು, ಬೀಜ ಬಿತ್ತನೆ ಕಾರ್ಯಗಳನ್ನು ನೆರವೇರಿಸಲಾಗುತ್ತದೆ. ಮೆಣಸು, ಈರುಳ್ಳಿ, ಟೊಮೊಟೊ ಮತ್ತಿತ್ತರೆ ಬೆಳೆ ಕೋಯ್ಲು ಸಹ ನಡೆಸಲಾಗುತ್ತದೆ. ಅರಣ್ಯ ಸಸಿಗಳನ್ನು ನೆಡುವುದು, ಬಾಳೆ ತೋಟಕ್ಕೆ ಲಘು ಪೋಷಕಾಂಶ ಸಿಂಪಡಣೆ ಸೇರಿದಂತೆ ಇತರ ಚಟುವಟಿಕೆಗಳನ್ನು ನಡೆಸಲು ಯೋಜಿಸಲಾಗಿದೆ.