ETV Bharat / state

ಸಿದ್ದರಾಮಯ್ಯ ಗಂಟಲಿನಿಂದ ಮಾತಾಡ್ತಾರೆ, ಹೃದಯದಿಂದಲ್ಲ: ಸಚಿವ ವಿ.ಸೋಮಣ್ಣ

ಆಲಿಬಾಬಾ ಮತ್ತು 40 ಕಳ್ಳರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಪಕ್ಷ ನಾಯಕರು ಗಂಟಲಿನಿಂದ ಮಾತನಾಡುತ್ತಿದ್ದಾರೆ, ಹೃದಯದಿಂದಲ್ಲ ತಿರುಗೇಟು ನೀಡಿದ್ದಾರೆ.

somanna
ವಿ ಸೋಮಣ್ಣ
author img

By

Published : Jan 26, 2023, 1:32 PM IST

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ

ಚಾಮರಾಜನಗರ: "ನಾನು ಸಿದ್ದರಾಮಯ್ಯ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ಒಮ್ಮೆ ಮಾತುಗಳು ಶುರುವಾದ್ರೆ ಅದು ಮತ್ತೆಲ್ಲಿಗೋ ಹೋಗುತ್ತದೆ. ನನಗೆ ಈಗಲೂ ಆತ್ಮವಿಶ್ವಾಸವಿದೆ, ಅವರು ಗಂಟಲಿನಿಂದ ಮಾತನಾಡುತ್ತಿದ್ದಾರೆ, ಹೃದಯದಿಂದಲ್ಲ" ಎಂದು ಸಚಿವ ಸೋಮಣ್ಣ ಟಾಂಗ್ ಕೊಟ್ಟರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲಿಬಾಬಾ ಮತ್ತು 40 ಕಳ್ಳರು ಎಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯಿಸಿದರು. "ಚುನಾವಣೆ ಬರುತ್ತದೆ, ಹೋಗುತ್ತದೆ. ಅವರು 70 ವರ್ಷ ಅಧಿಕಾರದಲ್ಲಿದ್ದರು, 5-10 ವರ್ಷದಿಂದ ನಾವಿದ್ದೇವೆ. ಸೆಸ್ಕ್ ನೌಕರರಿಗೆ ಕೊಡುತ್ತಿದ್ದ ಉಚಿತ ವಿದ್ಯುತ್ ಅನ್ನು ವಾಪಸ್ ತೆಗೆದುಕೊಂಡಿದ್ದು ಯಾರು?. ಅವರ ಭರವಸೆಗಳು ಭರವಸೆಗಳಾಗಿಯೇ ಉಳಿಯುತ್ತದೆ. ಅವರದ್ದೇ ಸರ್ಕಾರ ರಾಜಾಸ್ಥಾನದಲ್ಲಿದೆ. ಮೊದಲು ಅಲ್ಲಿ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಿ" ಎಂದು ಸವಾಲು ಹಾಕಿದರು.

ಚಾಮರಾಜನಗರದಲ್ಲಿ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ನಾನು ಚಲಾವಣೆಯಲ್ಲಿರುವ ನಾಣ್ಯ, ರಾಜ್ಯದಲ್ಲಿ ನನಗೇ ಎಂಬ 25-30 ಕ್ಷೇತ್ರ ಇದೆ, ಬಿಜೆಪಿ ಗೆಲ್ಲಲಾಗಲ್ಲ ಎಂಬ ಕ್ಷೇತ್ರಗಳಲ್ಲಿ ಅತಿಹೆಚ್ಚು ಬಹುಮತದಿಂದ ಗೆಲ್ಲಿಸಿದ್ದೇನೆ, ನನಗೆ ಗೋವಿಂದರಾಜನಗರ ಕ್ಷೇತ್ರ ಇದೆ, ಪಕ್ಷ ಎಲ್ಲಿ ಹೇಳುತ್ತೆ ಅಲ್ಲಿ ನಿಂತುಕೊಳ್ಳುತ್ತೇನೆ" ಎಂದರು.

ಇದನ್ನೂ ಓದಿ: ಖತರ್ನಾಕ್, ಏಜೆಂಟ್, ಚಾಂಡಾಳ.. ಅಧಿಕಾರಿಗಳಿಗೆ ಮಾತಿನ ಕಜ್ಜಾಯ ಕೊಟ್ಟ ಸಚಿವ ಸೋಮಣ್ಣ

ಧ್ವಜಾರೋಹಣ ನೆರವೇರಿಸಿದ ಸೋಮಣ್ಣ: ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ನಗರದ ಡಾ.ಬಿ‌.ಆರ್‌.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ 74ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ‌.ಸೋಮಣ್ಣ ನೆರವೇರಿಸಿದರು. ಧ್ವಜಾರೋಹಣ ನೆರವೇರಿಸಿದ ಬಳಿಕ ಪೊಲೀಸ್, ಅಬಕಾರಿ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ತುಕಡಿಗಳು ಆಕರ್ಷಕ ಪಥ ಸಂಚಲನ ನಡೆಸಿ ಗೌರವ ವಂದನೆ ಸಲ್ಲಿಸಿದರು. ಬಳಿಕ, ಗಣರಾಜ್ಯೋತ್ಸವದ ಸಂದೇಶ ಹಂಚಿಕೊಂಡ ಸೋಮಣ್ಣ, "ಕರ್ನಾಟಕದ ಪಾಲಿಗೆ ಅಭಿವೃದ್ಧಿಯಲ್ಲಿ ಸುವರ್ಣ ಯುಗ ಆರಂಭಗೊಂಡಿದೆ. ನಮ್ಮ ಸರ್ಕಾರದ ಯೋಜನೆ, ಕಾರ್ಯಕ್ರಮಗಳು ಕರ್ನಾಟಕದ ಚಿತ್ರಣ ಬದಲಿಸಿದೆ" ಎಂದರು.

"ಗಡಿಜಿಲ್ಲೆ ಚಾಮರಾಜನಗರದ ಸರ್ವತೋಮುಖ ಅಭಿವೃದ್ಧಿಗೆ ನಮ ಸರ್ಕಾರ ಕಟಿಬದ್ಧವಾಗಿದೆ. ಬಲಿಷ್ಠ ಭಾರತದ ನಿರ್ಮಾಣದ ಸಂಕಲ್ಪ ತೊಟ್ಟು ದಿನದ 24 ಗಂಟೆ ಪ್ರಜಾ ಸೇವಕನಂತೆ ದುಡಿಯುತ್ತಿರುವ ಪ್ರಧಾನಿ ಮೋದಿ ಕೈ ಬಲಪಡಿಸುವ ಜೊತೆಗೆ ಶಕ್ತಿಶಾಲಿ ಕರ್ನಾಟಕದ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡೋಣ" ಎಂದರು. ಇನ್ನು, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೂ ಮುನ್ನ ಚಾಮರಾಜನಗರ ಜಿಲ್ಲಾಡಳಿತ ಭವನ ಆವರಣದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಇದನ್ನೂ ಓದಿ: ಸೋಮಣ್ಣ ಸಚಿವರಾಗಲು ನಾಲಾಯಕ್, ಮಹಿಳೆ ಮೇಲೆ ಕೈಮಾಡಿದ್ದು ಅವರ ಸಂಸ್ಕೃತಿ ತೋರಿಸುತ್ತಿದೆ: ಸಿದ್ದರಾಮಯ್ಯ

ಪಿಡಿಒಗೆ ಅಪಘಾತ: ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ವಾಪಸ್​ ಆಗುವಾಗ ಪಿಡಿಒ ಒಬ್ಬರಿಗೆ ಕೋಳಿ ಸಾಕಾಣಿಕೆ ವಾಹನ ಡಿಕ್ಕಿಯಾಗಿರುವ ಘಟನೆ ಹನೂರು ತಾಲೂಕಿನ ದಿನ್ನಳ್ಳಿ ಸಮೀಪ ನಡೆದಿದೆ‌. ಸೋಮಶೇಖರ್ (42) ದಿನ್ನಳ್ಳಿ ಗಾಯಗೊಂಡ ಪಿಡಿಒ. ಪಂಚಾಯತಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮನೆಗೆ ವಾಪಸ್​ ಬರುವಾಗ ಅಪಘಾತವಾಗಿದೆ. ಸೋಮಶೇಖರ್ ಅವರಿಗೆ ರಾಮಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.