ಚಾಮರಾಜನಗರ : ಕೈ ಅಭ್ಯರ್ಥಿ ಕೆಜೆಎಫ್ ಬಾಬು ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣಗೆ ಎಬಿಸಿಡಿ ಗೊತ್ತಿಲ್ಲ. ನನಗೆ ಗೊತ್ತು ಆತ ಯಾರು, ಆತನ ಹಿನ್ನೆಲೆ ಏನು ಎಂಬುದು ಎಂದು ಸಚಿವ ಸೋಮಶೇಖರ್ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಜಿಎಫ್ ಬಾಬು ಉತ್ತಮ ಅಭ್ಯರ್ಥಿ ಎಂಬಂತೆ ಆರ್ ಧ್ರುವನಾರಾಯಣ ಮಾತನಾಡಿದ್ದಾರೆ. ಆದರೆ, ಬಾಬು ವಿರುದ್ಧ 60ಕ್ಕೂ ಹೆಚ್ಚು FIR ದಾಖಲಾಗಿವೆ.
20 FIR ನನ್ನ ಮೊಬೈಲ್ನಲ್ಲೇ ಇವೆ. ಆತ ಏನು ಎಂದು ನನಗೆ ಗೊತ್ತು, ಬೆಂಗಳೂರು ಅಭ್ಯರ್ಥಿಗಳ ಬಗ್ಗೆ ಕೆಜಿಎಫ್ ಬಾಬು ಬಗ್ಗೆ ಧ್ರುವನಾರಾಯಣಗೆ ಎಬಿಸಿಡಿಯೂ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.
ಇನ್ನು, ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಕುರಿತು ಮಾತನಾಡಿ, ಮೈಸೂರಿನಲ್ಲಿ ದಳದ ಜೊತೆ ಯಾವುದೇ ಹೊಂದಾಣಿಕೆ ಇಲ್ಲ. ಬೇರೆ ಜಿಲ್ಲೆಗಳ ಬಗ್ಗೆ ನನಗೆ ಮಾಹಿತಿ ಇಲ್ಲ, ಬೆಳಗಾವಿ ಚುನಾವಣೆ ಬಗ್ಗೆಯೂ ಗೊತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ಕುರಿತ ಪ್ರಶ್ನೆಗೆ ಉತ್ತರಿಸದೇ ಜಾರಿಕೊಂಡರು.
ಇದನ್ನೂ ಓದಿ : ಬಿ ವೈ ವಿಜಯೇಂದ್ರಗೆ ಮೈಸೂರು ಭಾಗದ ಪಕ್ಷದ ಸಂಘಟನೆಗೆ ಸಚಿವ ಸೋಮಶೇಖರ್ ಬಹಿರಂಗ ಆಹ್ವಾನ
ಮಂಜೇಗೌಡ ತಮಗೆ ಬಹಿರಂಗ ಪತ್ರ ಬರೆದಿರುವ ಮಾಹಿತಿ ಇದೆ. ಆದರೆ, ಪತ್ರವನ್ನು ನಾನು ನೋಡಿಲ್ಲ, ಪತ್ರ ಓದಿದ ಬಳಿಕ ಅದಕ್ಕೆ ಸಮಂಜಸವಾದ ಉತ್ತರವನ್ನು ಕೊಡುತ್ತೇನೆ ಎಂದು ಮಂಜೇಗೌಡ ಬಹಿರಂಗ ಪತ್ರಕ್ಕೆ ತಿರುಗೇಟು ಕೊಟ್ಟರು.
ರಘು ಕೌಟಿಲ್ಯ ಅವರು ಮೊದಲ ಪ್ರಾಶಸ್ತ್ಯ ಮತದಿಂದಲೇ ಗೆಲ್ಲುವ ಭರವಸೆ ಮೂಡಿದೆ. ಚಾಮರಾಜನಗರ-ಮೈಸೂರಿನ ಗ್ರಾಮಾಂತರ ಭಾಗದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಬಿಜೆಪಿ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.