ಚಾಮರಾಜನಗರ : ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಹಿಜಾಬ್ ಹಾಕಲು ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ಹಾಕಿಕೊಳ್ಳುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಸಮವಸ್ತ್ರ ಪಾಲನೆ ಮಾಡಿ, ಪದವಿ ಕಾಲೇಜುಗಳಲ್ಲಿ ಸಮವಸ್ತ್ರದ ನೀತಿಯಿಲ್ಲ. ಅಲ್ಲಿಗೆ ಬೇಕಾದ್ರೆ ಏನಾದರೂ ಹಾಕ್ಕೊಂಡ್ ಬನ್ನಿ ಎಂದರು.
ನಾಳೆಯಿಂದ ಪದವಿ ಕಾಲೇಜುಗಳು ಆರಂಭವಾಗುತ್ತಿವೆ. ಕೋಮು ಭಾವನೆ ಹುಟ್ಟು ಹಾಕುವಂತೆ ಯಾರೇ ವ್ಯಕ್ತಿಗಳಿದ್ದರೂ ಅದನ್ನು ಮಾಡಬೇಡಿ. ಕಾನೂನನ್ನು ಗೌರವಿಸಿ ಎಂದು ಮನವಿ ಮಾಡಿದ ಅವರು, ಸಮಾಜ ಎಂದಮೇಲೆ ಎಲ್ಲವೂ ಇರಲಿದೆ. ಅದನ್ನು ಮೀರಿ ನಿಲ್ಲಬೇಕು, ದುಷ್ಟ ಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಸರ್ಕಾರಕ್ಕಿದೆ ಎಂದರು.
ಇದನ್ನೂ ಓದಿ: ಮತೀಯ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು : ಸಚಿವ ಆರಗ ಜ್ಞಾನೇಂದ್ರ
ವಿಪಕ್ಷ ನಾಯಕ ಸಿದ್ದರಾಮಯ್ಯ ಆರ್ಥಿಕ ತಜ್ಞರು, ಅವರ ಕಾಲದಲ್ಲಿ ಎಷ್ಟೆಷ್ಟು ಸಾಲ ತೆಗೆದುಕೊಂಡಿದ್ದರು, ಸಾಲದಭಾರವನ್ನು ಸಮಾಜ ಮತ್ತು ಬೇರೆ ಸರ್ಕಾರಕ್ಕೆ ಹೊರಿಸಿರುವ ಬಗ್ಗೆ ಮೊದಲು ಅವರು ಮಾತನಾಡಬೇಕು.
ನಮ್ಮ ಈ ಅವಧಿಯಲ್ಲಿ ಕೊರೊನಾ ಕಾಲದಲ್ಲಿ ಬಹಳ ಉತ್ತಮವಾಗಿ ಸರ್ಕಾರ ಕೆಲಸ ಮಾಡಿದೆ, ಅವರವರ ಬೆನ್ನನ್ನು ಮೊದಲು ಅವರು ನೋಡಿಕೊಳ್ಳಬೇಕು.
ಏನೆಲ್ಲಾ ಘನಕಾರ್ಯ ಮಾಡಿದ್ದಾರೆಂದು ಅವರು ಅರ್ಥೈಸಿಕೊಂಡರೆ ಒಳ್ಳೆಯದು ಎಂದು ಸಾಲದ ಸುಳಿಯಲ್ಲಿ ಸರ್ಕಾರ ಸಿಲುಕಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟರು.