ಚಾಮರಾಜನಗರ: 2021ನೇ ಸಾಲಿನ ಜಾನಪದ ಪರಿಷತ್ತಿನ ಜಾನಪದ ಲೋಕ ಪ್ರಶಸ್ತಿಗೆ ನಗರದ ರಾಮಸಮುದ್ರದ ಗೊರವರ ಕುಣಿತದ ಕಲಾವಿದ ಮಲ್ಲೇಗೌಡ ಆಯ್ಕೆಯಾಗಿದ್ದಾರೆ.
ಮಾ.12 ರಿಂದ 14 ರವರೆಗೆ ರಾಮನಗರದಲ್ಲಿ ಜಾನಪದ ಲೋಕೋತ್ಸವ ಕಾರ್ಯಕ್ರಮ ಆಯೋಜನೆಯಾಗಿದ್ದು, 13 ರಂದು ಮಲ್ಲೇಗೌಡರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಓದಿ: ಮರಳಿ ಊರಿಗೆ: ಮಹಾರಾಷ್ಟ್ರದ ಭಕ್ತರಿಗೆ ಈ ಬಾರಿ ಇಲ್ಲ ಮಾಯಕ್ಕನ ದರ್ಶನ ಭಾಗ್ಯ
ರಾಮಸಮುದ್ರದಲ್ಲಿ ಗೊರವರ ಕುಣಿತದ ಹಲವಾರು ಕಲಾವಿದರಿದ್ದು, ಇಂದಿಗೂ ಈ ಕಲೆಯನ್ನು ಉಳಿಸಿಕೊಂಡು ಬರಲಾಗುತ್ತಿದೆ. ಯುವಕರಿಗೆ ಈ ಕಲೆಯನ್ನು ಹಿರಿಯರು ಧಾರೆ ಎರೆಯುತ್ತಿದ್ದಾರೆ.