ETV Bharat / state

ದಾಖಲೆ ನಿರ್ಮಿಸಿದ ಮಲೆಮಹದೇಶ್ವರ ಬೆಟ್ಟದ ಹುಂಡಿ ಆದಾಯ - Malemahadeshwara temple hundi created new record

ಪ್ರಸಿದ್ಧ ತೀರ್ಥಕ್ಷೇತ್ರವಾದ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಂಡಿ ಎಣಿಕೆಯಲ್ಲಿ ದಾಖಲೆ ಮಟ್ಟದಲ್ಲಿ ಹಣ ಸಂಗ್ರಹವಾಗಿದೆ.

Malemahadeshwara temple hundi created new record
ದಾಖಲೆ ನಿರ್ಮಿಸಿದ ಮಲೆಮಹದೇಶ್ವರ ಬೆಟ್ಟದ ಹುಂಡಿ ಆದಾಯ
author img

By

Published : Mar 1, 2020, 6:58 AM IST

ಚಾಮರಾಜನಗರ: ಪ್ರಸಿದ್ಧ ತೀರ್ಥಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಂಡಿ ಎಣಿಕೆಯಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ.

ಬರೋಬ್ಬರಿ 15 ತಾಸುಗಳ ಎಣಿಕೆ ನಡೆದಿದ್ದು, 2,51,61,247 ರೂ.ಸಂಗ್ರಹವಾಗುವ ಮೂಲಕ ಇಲ್ಲಿವರೆಗಿನ ಅತಿಹೆಚ್ಚು ಆದಾಯದ ದಾಖಲೆಯನ್ನು 2020ರ ಶಿವರಾತ್ರಿ ಬರೆದಿದೆ. ಕಳೆದ ವರ್ಷದ ಶಿವರಾತ್ರಿ ವೇಳೆ 2.13 ಕೋಟಿ ರೂ.‌ಸಂಗ್ರಹವಾಗಿದ್ದೇ ಅತೀ ಹೆಚ್ಚಿನ ಮೊತ್ತವಾಗಿತ್ತು.‌ ಇದರೊಟ್ಟಿಗೆ 50 ಗ್ರಾಂ ಚಿನ್ನ, 2.40 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಮಾಯಕಾರನಿಗೆ ಅರ್ಪಿಸಿದ್ದಾರೆ.

Malemahadeshwara temple hundi created new record
ಹುಂಡಿ ಎಣಿಕೆ ಕಾರ್ಯ

ಅಲ್ಲದೇ 6 ದಿನಗಳ ನಡೆದ ಶಿವರಾತ್ರಿ ಜಾತ್ರೆಯಲ್ಲಿ 9 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ನೀಡಿದ್ದು ಪ್ರಾಧಿಕಾರಕ್ಕೆ ಹುಂಡಿ ಹೊರತುಪಡಿಸಿ ಲಾಡು ಮಾರಾಟ, ಸೇವೆಗಳು, ವಿಶೇಷ ಶುಲ್ಕ, ವಾಹನ ಶುಲ್ಕದಿಂದಲೇ ಬರೋಬ್ಬರಿ 3.5 ಕೋಟಿ ರೂ. ಆದಾಯ ಬಂದಿರುವುದು ಗಮನಾರ್ಹವಾಗಿದೆ.

ಸಂಗ್ರಹವಾದ ಹಣ

ಒಟ್ಟಿನಲ್ಲಿ 77 ಮಲೆಯ ಒಡೆಯ ವರ್ಷದಿಂದ ವರ್ಷಕ್ಕೆ ಆದಾಯ ವೃದ್ಧಿಸಿಕೊಳ್ಳುತ್ತಿದ್ದು, ಮಲೆ ಮಾದಪ್ಪ ಹುಂಡಿ ಎಣಿಕೆ ಜೊತೆಗೆ ಇತರೆ ಆದಾಯವೂ ಸೇರಿದರೆ ಮಹದೇಶ್ವರ ಷಟ್ಕೋಟಿ ಕೋಟಿ ಪರಮೇಶ್ವರನಾಗಿದ್ದಾನೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.