ETV Bharat / state

ಮಲೆಮಹದೇಶ್ವರ ಭಕ್ತರ ಪೇಜ್ ಹ್ಯಾಕ್​.. ಅಶ್ಲೀಲ ವಿಡಿಯೋ ಅಪಲೋಡ್, ಭಕ್ತರ ಆಕ್ರೋಶ

ಶ್ರೀಮಲೆ ಮಹದೇಶ್ವರ ಸ್ವಾಮಿ ಹೆಸರಿನಲ್ಲಿ ನಿರ್ಮಿಸಲಾಗಿರುವ ಫೇಸ್​ಬುಕ್​ ಪೇಜ್​ನ್ನು ಹ್ಯಾಕ್​ ಮಾಡಲಾಗಿದೆ. ಇದರಲ್ಲಿ ಅಶ್ಲೀಲ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತಿದ್ದು, ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Malemahadeshwar
ಮಲೆಮಹದೇಶ್ವರ
author img

By

Published : Sep 21, 2022, 1:22 PM IST

ಚಾಮರಾಜನಗರ: ಲಕ್ಷಾಂತರ ಭಕ್ತರ ಪರಮ ದೈವ ‘ಶ್ರೀಮಲೆ ಮಹದೇಶ್ವರ ಸ್ವಾಮಿ’ಯ ಹೆಸರಿನಲ್ಲಿ ಫೇಸ್​​ಬುಕ್ ಪೇಜ್​ವೊಂದನ್ನು ಸೃಷ್ಟಿಸಲಾಗಿತ್ತು. ಇದರಲ್ಲಿ ಅಶ್ಲೀಲ ವಿಡಿಯೋಗಳು ಅಪ್‌ಲೋಡ್ ಆಗುತ್ತಿದ್ದು, ಇದರಿಂದ ಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆ.

ಕೊಳ್ಳೇಗಾಲದ ಸಂಜಯ್‌ಕುಮಾರ್ 2013ರಲ್ಲಿ ಇದನ್ನು ಕ್ರಿಯೇಟ್​​ ಮಾಡಿದ್ದರು. ಈ ಫೇಜ್‌ಬುಕ್ ಪೇಜ್​ನಲ್ಲಿ ಸುಮಾರು 17 ಸಾವಿರ ಅನುಯಾಯಿಗಳಿದ್ದಾರೆ. ಇದರಲ್ಲಿ ದೇವರ ಫೋಟೋಗಳು, ಪೂಜಾ ಕೈಂಕರ್ಯಗಳು ಸೇರಿದಂತೆ ಇತರ ಮಾಹಿತಿಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ಆದರೆ ಕಳೆದ ಎರಡು ತಿಂಗಳ ಹಿಂದೆ ಈ ಪೇಜ್​ ಅನ್ನು ಹ್ಯಾಕ್ ಮಾಡಲಾಗಿದೆ.

ಸ್ಟೋರಿಗಳ ವಿಭಾಗದಲ್ಲಿ ಹುಡುಗಿಯರ ಅಶ್ಲೀಲ ಫೋಟೋ, ವಿಡಿಯೋಗಳನ್ನು ಹಾಕಲಾಗುತ್ತಿದೆ. ಫೇಸ್‌ಬುಕ್​ ಪೇಜ್ ಹ್ಯಾಕ್ ಆದ ಮರು ದಿನವೇ ಅಡ್ಮಿನ್ ಸಂಜಯ್‌ಕುಮಾರ್ ಸೈಬರ್ ಕ್ರೈಂಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. 30 ಜನರಿಂದ ಈ ಪೇಜ್ ವಿರುದ್ಧ ರಿಪೋರ್ಟ್ ಮಾಡಿಸುವಂತೆ ಪೊಲೀಸರು ಸಂಜಯ್‌ಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮಾದಪ್ಪನ ಬೆಟ್ಟದಲ್ಲಿ ಭಕ್ತ ಸಾಗರ, ಎರಡು ದಿನಗಳಲ್ಲಿ 20 ಲಕ್ಷ ರೂ. ಆದಾಯ!

ಈವರೆಗೆ 5 ಜನರಿಂದ ಸಂಜಯ್ ರಿಪೋರ್ಟ್ ಮಾಡಿಸಿದ್ದಾರೆ. ಹಾಗಾಗಿ ಹ್ಯಾಕ್ ಆಗಿರುವ ಪೇಜ್​ ಅನ್ನು ಡೀ ಆ್ಯಕ್ಟಿವ್ ಮಾಡಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ತಾನು ಕ್ರಿಯೇಟ್ ಮಾಡಿದ್ದ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿದೆ. ಈ ಬಗ್ಗೆ ದೂರು ಸಲ್ಲಿಸಿದ್ದರೂ ಕ್ರಮವಹಿಸಿಲ್ಲ. ಅದರಲ್ಲಿ ಅಶ್ಲೀಲ ಫೋಟೋ, ವಿಡಿಯೋಗಳು ಅಪ್‌ಲೋಡ್ ಆಗುತ್ತಿವೆ. ಹ್ಯಾಕ್ ಆಗಿರುವ ಬಗ್ಗೆ ತಿಳಿದ ಜನರು ನನಗೆ ಕರೆ ಮಾಡಿ ಬೈಯುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.