ಚಾಮರಾಜನಗರ: ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು ಈಗ ಕೊರೊನಾ ವಾರಿಯರ್ಗಳಾಗಿ ಫೀಲ್ಡಿಗಿಳಿದಿದ್ದು, ಸೋಂಕಿತರ ಆರೈಕೆ ಜತೆಗೆ ಕೊರೊನಾದ ಸಮರೋಪಾದಿ ಕಾರ್ಯದಲ್ಲೇ ಇವರು ದೇವರನ್ನು ಕಾಣುತ್ತಿದ್ದಾರೆ.
ಕೊರೊನಾ ಕರ್ತವ್ಯಕ್ಕೆ ಸಿಬ್ಬಂದಿ ಕಳುಹಿಸಲು ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿದ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಮ್ಮ 100 ಮಂದಿ ಸಿಬ್ಬಂದಿಯನ್ನು ಕೋವಿಡ್ ಕರ್ತವ್ಯಕ್ಕೆ ಕಳುಹಿಸಿದ್ದಾರೆ. ದೇಗುಲದಲ್ಲಿ ಕೆಲಸ ಮಾಡುತ್ತಿದ್ದ ಇವರೀಗ ಮಹಾಮಾರಿ ವಿರುದ್ಧ ಹೋರಾಡುತ್ತಿದ್ದಾರೆ.
ಇದನ್ನೂ ಓದಿ: ಬರೀ ಹೆಣ, ಬೆಡ್ ತೋರಿಸಬೇಡಿ; ಮಾಧ್ಯಮಗಳಿಗೆ ಸಚಿವ ಕತ್ತಿ ಮನವಿ
ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸ್ವಚ್ಛತೆ ಮತ್ತು ಸೆಕ್ಯೂರಿಟಿ ಕೆಲಸಗಳನ್ನು ಇವರು ಮಾಡುತ್ತಿದ್ದಾರೆ. ಸಿಬ್ಬಂದಿ ಮಾಡುತ್ತಿರುವುದು ಪುಣ್ಯದ ಕೆಲಸ ಎಂದು ಜಯವಿಭವಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಮುಂದೆಯೂ ಕೊರೊನಾ ಕರ್ತವ್ಯಕ್ಕೆ ಅಗತ್ಯ ಬಿದ್ದಲ್ಲಿ ಜಿಲ್ಲಾಡಳಿತದ ಕರೆಗೆ ಓಗೊಡಲಿದ್ದೇವೆ ಎಂದಿದ್ದಾರೆ.