ETV Bharat / state

ತೆರಕಣಾಂಬಿ ಗ್ರಾಮದ ಪದವಿ ಕಾಲೇಜು ಸ್ಥಳಾಂತರ; ಸ್ಥಳೀಯರಿಂದ ಭಾರಿ ವಿರೋಧ - ಶಾಸಕ ಸಿ.ಎಸ್.ನಿರಂಜನ ಕುಮಾರ್

ಸಚಿವರಾಗಿದ್ದ ಎಚ್.ಎಸ್.ಮಹದೇವ ಪ್ರಸಾದ್ ಅವರು 2014-15 ರಲ್ಲಿ ಕಾಲೇಜನ್ನು ತೆರಕಣಾಂಬಿ ಗ್ರಾಮಕ್ಕೆ ಮಂಜೂರು ಮಾಡಿಸಿದ್ದರು. ಮೊದಲಿಗೆ 45 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕಾಲೇಜು ಬಳಿಕ ವಿದ್ಯಾರ್ಥಿಗಳ ಕೊರತೆ ಎದುರಿಸಿತು. ಬಳಿಕ ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರು ಉನ್ನತ ಶಿಕ್ಷಣ ಸಚಿವರ ಬಳಿ ಮಾತುಕತೆ ನಡೆಸಿದರೂ ಕಾಲೇಜು ಉಳಿಸಿಕೊಳ್ಳಲು ಆಗಲಿಲ್ಲ.

college
ಕಾಲೇಜು ಕಟ್ಟಡ
author img

By

Published : Jul 22, 2020, 1:28 PM IST

ಗುಂಡ್ಲುಪೇಟೆ (ಚಾಮರಾಜನಗರ): ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಪದವಿ ಕಾಲೇಜು ಸ್ಥಳಾಂತರವಾಗಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕಾಲೇಜಿಗೆ ಸ್ವಂತ ಕಟ್ಟಡವಾಗಿ ಉದ್ಘಾಟನೆಯಾಗುವ ಮುನ್ನವೇ ಸ್ಥಳಾಂತರವಾಗುತ್ತಿದೆ.

ಸರ್ಕಾರದ ಉಪಕಾರ್ಯದರ್ಶಿ ಪದವಿ ಕಾಲೇಜನ್ನು ಸ್ಥಳಾಂತರ ಮಾಡುವಂತೆ ಎರಡನೇ ಬಾರಿ ಆದೇಶ ಹೊರಡಿಸಿದ್ದಾರೆ. ಮೊದಲ ಬಾರಿಗೆ ಸ್ಥಳಾಂತರ ಮಾಡುವಂತೆ ಆದೇಶ ಬಂದಾಗ ಇಲ್ಲಿನ ಜನಪ್ರತಿನಿದಿಗಳು, ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು.

ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಅಂದು ಸಚಿವರಾಗಿದ್ದ ಎಚ್.ಎಸ್.ಮಹದೇವ ಪ್ರಸಾದ್ ಅವರು 2014-15 ರಲ್ಲಿ ಕಾಲೇಜನ್ನು ತೆರಕಣಾಂಬಿ ಗ್ರಾಮಕ್ಕೆ ಮಂಜೂರು ಮಾಡಿಸಿದ್ದರು. ಮೊದಲಿಗೆ 45 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕಾಲೇಜು ಬಳಿಕ ವಿದ್ಯಾರ್ಥಿಗಳ ಕೊರತೆ ಎದುರಿಸಿತು. ಬಳಿಕ ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರು ಉನ್ನತ ಶಿಕ್ಷಣ ಸಚಿವರ ಬಳಿ ಮಾತುಕತೆ ನಡೆಸಿದರೂ ಸಹ ಕಾಲೇಜು ಉಳಿಸಿಕೊಳ್ಳಲು ಆಗಲಿಲ್ಲ.

ಪದವಿ ಕಾಲೇಜು ಸ್ಥಳಾಂತರಕ್ಕೆ ವಿರೋಧ

ಕಳೆದ ಒಂದು ತಿಂಗಳಿನಿಂದಲೇ ತೆರಕಣಾಂಬಿ ಪದವಿ ಕಾಲೇಜು ಬೇರೆ ಕಡೆಗೆ ಸ್ಥಳಾಂತರವಾಗುತ್ತದೆ ಎಂಬ ಸುದ್ದಿ ಬಂದಾಗಲೇ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಅವರನ್ನು ಹಲವು ಬಾರಿ ಭೇಟಿಯಾಗಿ ಯಾವುದೇ ಕಾರಣಕ್ಕೂ ಕಾಲೇಜು ಸ್ಥಳಾಂತರಿಸಬೇಡಿ, ನಮ್ಮ ತೆರಕಣಾಂಬಿ ಗ್ರಾಮದಲ್ಲಿ ಕಾಲೇಜನ್ನು ಮುಂದುವರಿಸಿ ಎಂದು ಮನವಿ ಮಾಡಿದ್ದೆ, ಇದಕ್ಕೆ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಂದ ಕಾಲೇಜಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆ ಹಾಕಿದ್ದರು ಎಂದು ಶಾಸಕ ಸಿ.ಎಸ್. ನಿರಂಜನ ಕುಮಾರ್ ಹೇಳಿದ್ದಾರೆ.

ಇತ್ತೀಚೆಗೆ ಅಧಿಕೃತವಾಗಿ ಕಾಲೇಜು ಸ್ಥಳಾಂತರವಾಗಿದೆ ಎಂಬ ಸುದ್ದಿ ತಿಳಿದ ನಂತರ ಸಚಿವರಿಗೆ ಕರೆ ಮಾಡಿ ಈ ಮಾಹಿತಿಯನ್ನು ತಿಳಿಸಿದಾಗ, ತೆರಕಣಾಂಬಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ. ನಾವು ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾಗಿಲ್ಲ. ಹಾಗಾಗಿ ಈ ಕಾಲೇಜನ್ನು ಬೇರೆ ಕಡೆಗೆ ವರ್ಗಾಯಿಸಬೇಕು ಎಂದು ಸಚಿವರು ತಿಳಿಸಿದರು. ಇದರ ಬದಲಿಗೆ ವ್ಯವಸ್ಥಿತವಾದ ಕಟ್ಟಡವಿರುವುದರಿಂದ ಅದೇ ಕಾಲೇಜಿನಲ್ಲಿ ನಿಮ್ಮ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರವನ್ನು ಪ್ರಾರಂಭಿಸೋಣ ಹಾಗೂ ಸಂಜೆ ಪದವಿ ಕಾಲೇಜನ್ನು ಪ್ರಾರಂಭ ಮಾಡೋಣ ಎಂದು ತಿಳಿಸಿದ್ದಾರೆ ಎಂದು ನಿರಂಜನ ಕುಮಾರ್ ಹೆಳಿದ್ದಾರೆ

ಈಗಾಗಲೇ ಗುಂಡ್ಲುಪೇಟೆ ತಾಲೂಕಿನಲ್ಲಿ ಎರಡು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಉತ್ತಮವಾಗಿ ನಡೆಯುತ್ತಿದೆ. ರಾಜ್ಯದ ಅನೇಕ ತಾಲೂಕುಗಳಲ್ಲಿ ಹಾಗೂ ಹೊಸ ತಾಲೂಕುಗಳಲ್ಲಿ ಪದವಿ ಕಾಲೇಜುಗಳು ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳ ಕೊರತೆ ಇರುವ ಕಾಲೇಜುಗಳನ್ನು ಅಂತಹ ತಾಲೂಕುಗಳಿಗೆ ಸ್ಥಳಾಂತರಗೊಳಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಕೊರತೆಯಿಂದ ಕಾಲೇಜು ಸ್ಥಳಾಂತರವಾಗಿದೆ ಹೊರತು ಇದರಲ್ಲಿ ಬೇರೆ ಯಾವುದೇ ದುರುದ್ದೇಶವಿಲ್ಲ, ಶಾಸಕನಾಗಿ ಬಹಳ ಪ್ರಾಮಾಣಿಕವಾಗಿ ಈ ವಿಚಾರದಲ್ಲಿ ಸಚಿವರ ಜೊತೆ ನಿರಂತರವಾಗಿ ಕಾಲೇಜು ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದೇನೆ, ಆದರೆ ವಿದ್ಯಾರ್ಥಿಗಳ ಕೊರತೆಯಿಂದ ಕಾಲೇಜು ಬೇರೆ ಕಡೆಗೆ ಸ್ಥಳಾಂತರವಾಗಿದೆ ಎಂದು ಶಾಸಕ ಸಿ.ಎಸ್. ನಿರಂಜನ ಕುಮಾರ್ ತಿಳಿಸಿದರು.

ಇರುವ ಕಾಲೇಜನ್ನು ಉಳಿಸಿಕೊಳ್ಳಲು ಆಗದ ಶಾಸಕರ ವೈಫಲ್ಯ ಎದ್ದು ಕಾಣುತ್ತದೆ. ಮುಂದೆ ಇಂತಹ ಕಾಲೇಜನ್ನು ಕ್ಷೇತ್ರಕ್ಕೆ ತರಲು ಸಾಧ್ಯವಾಗುತ್ತದೆಯಾ ಎಂದು ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಪ್ರಶ್ನೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕರು ಕಾಲೇಜು ಉಳಿಸಿಕೊಳ್ಳಲು ಆಗಲಿಲ್ಲ ಎಂದರೆ ಏನು ಪ್ರಯೋಜನ? ಆಡಳಿತ ಪಕ್ಷದ ಶಾಸಕರಾಗಿ ಇದ್ದು ಸಾಧನೆ ಏನು? ಎಂದು ರೈತ ಮುಖಂಡ ಕಡಬೂರು ಮಂಜುನಾಥ್ ಪ್ರಶ್ನಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.