ETV Bharat / state

ಡಾ. ಅಂಬೇಡ್ಕರ್ ಅಂದ್ರೇ ಸಿಂಬಲ್ ಆಫ್ ನಾಲೆಡ್ಜ್.. ಕಟೀಲ್ ಮೊದಲು ತಿಳಿಯಲಿ.. ಆರ್ ಧ್ರುವ ನಾರಾಯಣ್ - kpcc working president druva narayana news

ಡಾ. ಬಿ ಆರ್ ಅಂಬೇಡ್ಕರ್ ಸಿಂಬಲ್ ಆಫ್ ನಾಲೆಡ್ಜ್ ಎಂಬುದನ್ನು ಕಟೀಲ್ ತಿಳಿಯಬೇಕು. ಅಂಬೇಡ್ಕರ್ ಕ್ಯಾಂಟೀನ್ ಅಂತಾ ಹೆಸರಿಟ್ಟರೆ ಅಂಬೇಡ್ಕರ್ ಅವರಿಗೆ ಗೌರವ ಬರುತ್ತಾ? ಅದರ ಬದಲು ಪ್ರತಿ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಗ್ರಂಥಾಲಯಗಳನ್ನು ತೆರೆದು ಅವರ ಹೆಸರಿಡಿ. ಇಡೀ ಜಗತ್ತು ಅಂಬೇಡ್ಕರ್ ಅವರನ್ನ ಗುರುತಿಸಿರುವುದು ಸಿಂಬಲ್ ಆಫ್ ನಾಲೆಡ್ಜ್..

kpcc working president druva narayana pressmeet
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಹೇಳಿಕೆ
author img

By

Published : Aug 15, 2021, 6:57 PM IST

ಕೊಳ್ಳೇಗಾಲ : ಈಗಾಗಲೇ ಸಂಪುಟ ವಿಸ್ತರಣೆಯಲ್ಲಿ ಸರಿಯಾಗಿ ಖಾತೆ ಹಂಚಿಕೆಯಾಗಿಲ್ಲ. ಮಂತ್ರಿಮಂಡಲದಲ್ಲಿ ಸ್ಥಾನ ಸಿಕ್ಕಿಲ್ಲ ಎಂಬ ಭಿನ್ನಮತ ಎದ್ದಿದೆ. ಈ ಹಿನ್ನೆಲೆ ಸರ್ಕಾರ ಹೆಚ್ಚು ದಿನ‌ ಉಳಿಯುವುದಿಲ್ಲ. ಯಾವಾಗ ಬೇಕಾದರೂ ವಿಧಾನಸಭಾ ಚುನಾವಣೆ ಬರಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವ ನಾರಾಯಣ್ ಹೇಳಿದರು.

ಮಧ್ಯಂತರ ಚುನಾವಣೆ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಪ್ರತಿಕ್ರಿಯೆ..

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ 5 ವರ್ಷದ ಅಧಿಕಾರದಲ್ಲೂ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾಗಿತ್ತು. ಈಗಲೂ ಕೂಡ ಆಂತರಿಕ ಕಚ್ಚಾಟ, ಭಿನ್ನಾಭಿಪ್ರಾಯಗಳು ಸಾಕಷ್ಟಿವೆ. ರಮೇಶ್ ಜಾರಕಿಹೊಳಿ ಮನೆಯಲ್ಲಿ ಅತೃಪ್ತ ಶಾಸಕರ ಸಭೆ ನಡೆಯುತ್ತಿದೆ ಎಂದ್ರು.

ಸಿ ಟಿ ರವಿ ಸಂಸ್ಕೃತಿ ಇಲ್ಲದ ಮನುಷ್ಯ : 'ತಂದೆ ಬಗ್ಗೆ ಅನುಮಾನ ಇರುವವರು ಸಾವರ್ಕರ್ ಅವರನ್ನು ಪ್ರಶ್ನೆ ಮಾಡುತ್ತಾರೆ' ಎಂಬ ಸಿ ಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿ ಟಿ ರವಿ ಸಂಸ್ಕೃತಿ ಇಲ್ಲದ ಮನುಷ್ಯ. 2019ರಲ್ಲಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಇಬ್ಬರ ಪ್ರಾಣ ತೆಗೆದವರು.

ಪ್ರವಾಸೋದ್ಯಮ ಸಚಿವರಾಗಿದ್ದಾಗ ಜೂಜು ಕೇಂದ್ರ ಪ್ರಾರಂಭ ಮಾಡಲು ಹೊರಟಿದ್ದವರು, ಬಳಿಕ ಸ್ವಪಕ್ಷದಲ್ಲಿಯೇ ವಿರೋಧ ಎದುರಾದ ಮೇಲೆ ಸುಮ್ಮನಾಗಿದ್ದರು. ಇಂತವರ ಬಾಯಲ್ಲಿ ಇಂತಹ ಮಾತುಗಳೇ‌ ಬರೋದು. ನೈತಿಕತೆ‌ ಇಲ್ಲದವರ ಬಗ್ಗೆ ಹೆಚ್ಚು ಮಾತನಾಡುವುದು ಸೂಕ್ತವಲ್ಲ ಎಂದರು.

ಅಂಬೇಡ್ಕರ್ ಸಿಂಬಲ್ ಆಫ್ ನಾಲೆಡ್ಜ್ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಯ ಬಗ್ಗೆ ಮಾತನಾಡಿ, ಡಾ. ಬಿ ಆರ್ ಅಂಬೇಡ್ಕರ್ ಸಿಂಬಲ್ ಆಫ್ ನಾಲೆಡ್ಜ್ ಎಂಬುದನ್ನು ಕಟೀಲ್ ತಿಳಿಯಬೇಕು. ಅಂಬೇಡ್ಕರ್ ಕ್ಯಾಂಟೀನ್ ಅಂತಾ ಹೆಸರಿಟ್ಟರೆ ಅಂಬೇಡ್ಕರ್ ಅವರಿಗೆ ಗೌರವ ಬರುತ್ತಾ? ಅದರ ಬದಲು ಪ್ರತಿ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಗ್ರಂಥಾಲಯಗಳನ್ನು ತೆರೆದು ಅವರ ಹೆಸರಿಡಿ. ಇಡೀ ಜಗತ್ತು ಅಂಬೇಡ್ಕರ್ ಅವರನ್ನ ಗುರುತಿಸಿರುವುದು ಸಿಂಬಲ್ ಆಫ್ ನಾಲೆಡ್ಜ್ ಅಂತಾ ಎಂದರು.

ಅನುದಾನ ತರಲು ಸಂಪೂರ್ಣ ವಿಫಲ : ನಳಿನ್ ಕುಮಾರ್​ಗೆ ಬೇರ ಏನು ಕೆಲಸ ಇಲ್ಲ. ರಾಜ್ಯದಲ್ಲಿ ಜ್ಬಲಂತ ಸಮಸ್ಯೆಗಳಿವೆ. ಇವರು ಸಂಸದರಾಗಿದ್ದಾರೆ. ಆದರೆ, ಸಮಸ್ಯೆಗಳನ್ನ ಬಗೆಹರಿಸುತ್ತಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ತರಬೇಕಾದ ಅನುದಾನ ತರಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ರು.

ಪಕ್ಷದಿಂದ 25 ಸಂಸದರು ಗೆದ್ದಿದ್ದಾರೆ. ಆದರೆ, ನಮ್ಮ ರಾಜ್ಯದ ಪಾಲಿಗೆ ಬರಬೇಕಾದ ಜಿಎಸ್​ಟಿ ಹಣ, ಪ್ರವಾಹ ನಷ್ಟ ಭರಿಸುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ. ಇನ್ನೂ ವ್ಯಾಕ್ಸಿನ್​​ ಸಮರ್ಪಕವಾಗಿ ಒದಗಿಸುತ್ತಿಲ್ಲ. ಇಂತಹ ಸಮಸ್ಯೆಗಳ ಬಗ್ಗೆ ಗಮನಹರಿಸದೇ ಸಾರ್ವಜನಿಕರ ಗಮನ‌ ಬೇರೆಡೆ ಸೆಳೆಯಲು ಪಲಾಯನ ವಾದ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.