ETV Bharat / state

ಸಿದ್ದರಾಮಯ್ಯ ಯಾವತ್ತೂ ಹುಲಿನೇ, ಇಲಿಗಳಿಂದ ನಮಗಿಲ್ಲ ನಿರೀಕ್ಷೆ : ಪ್ರತಾಪ್ ಸಿಂಹಗೆ ಧ್ರುವ ಟಾಂಗ್

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರು ವನಾರಾಯಣ ಅವರು ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಯಾವತ್ತೂ ಹುಲಿನೇ, ಸಂಸದ ಪ್ರತಾಪ್​ ಸಿಂಹ ಅವರಂತಹ ಇಲಿಗಳಿಂದ ನಾವು ಏನನ್ನು ನಿರೀಕ್ಷೆ ಮಾಡಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಧ್ರುವನಾರಾಯಣ
Dhruvanarayana
author img

By

Published : Feb 27, 2021, 12:39 PM IST

ಚಾಮರಾಜನಗರ: ಸಿದ್ದರಾಮಯ್ಯ ಯಾವತ್ತೂ ಹುಲಿನೇ, ಇಂತಹ ಇಲಿಗಳಿಂದ ಏನು ನಾವು ನಿರೀಕ್ಷೆ ಮಾಡಲ್ಲ ಎಂದು ಪ್ರತಾಪ್ ಸಿಂಹ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಟಾಂಗ್ ಕೊಟ್ಟರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಟಾಂಗ್

ನೂತನ ಕಾರ್ಯಾಧ್ಯಕ್ಷರಾದ ಹಿನ್ನೆಲೆಯಲ್ಲಿ ನಗರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಮಾರಧ್ಯಮದವರೊಂದಿಗೆ ಮಾತನಾಡಿದ ಅವರು, ಇತಿಹಾಸದಲ್ಲೇ ಮೊದಲ ಬಾರಿಗೆ ಮೇಯರ್ ಆಗುತ್ತೇವೆಂದು ಬಿಜೆಪಿಯವರು ಸಡಗರದ ತಯಾರಿಯಲ್ಲಿದ್ದರು. ಆದರೆ ಅವರ ಆಸೆ ಫಲಿಸದಿದ್ದರಿಂದ ಪ್ರತಾಪ್ ಸಿಂಹ ಹತಾಶರಾಗಿ ಹೇಳಿಕೆ ನೀಡಿದ್ದಾರೆ. ಈ ರೀತಿಯ ಇಲಿಗಳಿಂದ ನಾವು ಏನನ್ನು ನಿರೀಕ್ಷೆ ಮಾಡಲ್ಲ ಎಂದು ಸಿಂಹ ಹೇಳಿಕೆಗೆ ಕುಟುಕಿದರು.

ಜೆಡಿಎಸ್​​ನವರು ಮಾಡಿಕೊಂಡಿದ್ದ ಒಪ್ಪಂದದಂತೆ ಅವರು ನಡೆದುಕೊಳ್ಳಲಿಲ್ಲ. ವಚನ ಭ್ರಷ್ಟರಾದರು. ಒಪ್ಪಿಗೆಯಂತೆ ನಮಗೆ ಈ ಬಾರಿ ಮೇಯರ್ ಪಟ್ಟ ಬಿಟ್ಟುಕೊಡಬೇಕಿತ್ತು. ಸಿದ್ದರಾಮಯ್ಯ ಅವರೇ ನನ್ನನ್ನು ವೀಕ್ಷಕನಾಗಿ ನೇಮಿಸಿದ್ದು, ಸಿದ್ದರಾಮಯ್ಯ ಯಾವತ್ತೂ ನಮ್ಮ ನಾಯಕರೇ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದು, ಪತ್ರಿಕಾ ಹೇಳಿಕೆ ಕೊಟ್ಟಿದ್ದು ಎರಡೂ ತಪ್ಪು ಎಂದು ಅವರು ತಿಳಿಸಿದರು.

ಓದಿ: ರಾಧಾಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಬಿಎಸ್​ವೈ: ವಿಶೇಷ ಪೂಜೆ

ಇಡೀ ಚುನಾವಣೆ ಪ್ರಕ್ರಿಯೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸೋಮವಾರ ವರದಿ ಸಲ್ಲಿಸುತ್ತೇನೆ.‌ ಬೆಲೆ ಏರಿಕೆ, ಬಿಜೆಪಿ ದುರಾಡಳಿದ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.