ETV Bharat / state

ವಿದೇಶಗಳಿಗೆ ಹೋಗಿ ಬುದ್ಧನ ನಾಡು ಅಂತಾರೆ, ಇಲ್ಲಿಗೆ ಬಂದು ಪಠ್ಯ ತೆಗೀತಾರೆ : ಬಿಜೆಪಿ ವಿರುದ್ಧ ಕಿಡಿ

author img

By

Published : Feb 20, 2021, 4:08 PM IST

ಶಾಂತಿ,ಸಹನೆ, ಕರುಣೆ, ಪ್ರೀತಿ, ಸಹಿಷ್ಣತೆಯಿಂದ ಬಾಳ್ವೆ ನಡೆಸುವ ಸಿದ್ಧಾಂತ ಬೌದ್ಧ ಧರ್ಮದ್ದಾಗಿದೆ. ಇಡೀ ಜಗತ್ತೇ ಬೌದ್ಧ ಧರ್ಮವನ್ನು ಒಪ್ಪಿದೆ. ಪ್ರಗತಿಪರವಾದ ಕರ್ನಾಟಕದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಬೌದ್ಧ, ಜೈನ ಧರ್ಮ ಅಧ್ಯಾಯವನ್ನು ಪಠ್ಯದಿಂದ ಕೈಬಿಟ್ಟಿರುವುದು ಸರಿಯಲ್ಲ..

ಆರ್.ಧ್ರುವನಾರಾಯಣ
R. Dhruvanarayana

ಚಾಮರಾಜನಗರ : ಹೊರ ದೇಶಗಳಿಗೆ ತೆರಳಿದ ವೇಳೆ ತಾನು ಬುದ್ಧನ ನಾಡಿನಿಂದ ಬಂದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ‌. ಆದರೆ, ಭಾರತಕ್ಕೆ ಹಿಂದಿರುಗಿದಾಗ ಬುದ್ಧನನ್ನು ಮರೆಯುತ್ತಾರೆ. ಇದು ಇಬ್ಬಗೆಯ ನೀತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಕಿಡಿಕಾರಿದರು.

ಪಠ್ಯ ತೆಗೆಯುವ ಕುರಿತಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ

ಯಳಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ವರ್ಷದಿಂದ ಪ್ರಾಚೀನ ಧರ್ಮಗಳಾದ ಬೌದ್ಧ ಹಾಗೂ ಜೈನ ಧರ್ಮದ ಅಧ್ಯಾಯವನ್ನು ಆರನೇ ತರಗತಿ ಪಠ್ಯಪುಸ್ತಕದಿಂದ ಕೈ ಬಿಟ್ಟಿರುವುದು ಖಂಡನೀಯ ಹಾಗೂ ವಿಷಾದನೀಯ.

ಭಾರತದಲ್ಲಿ ಹಲವು ಧರ್ಮ, ವಿವಿಧ ಭಾಷಿಕರು ಕೂಡಿ ಬಾಳುತ್ತಿದ್ದಾರೆ. ಆದರೆ, ಅದನ್ನು ಬಿಜೆಪಿಯವರು ಮರೆಯುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಎರಡೂ ಧರ್ಮಗಳ ಅಧ್ಯಾಯವನ್ನು ಪಠ್ಯದಿಂದ ತೆಗೆಯಲಾಗಿದೆ ಎಂದು ಆರೋಪಿಸಿದರು.

ವಿಶ್ವಸಂಸ್ಥೆಯ 74ನೇ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಹೋಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ಭಯೋತ್ಪಾದನೆ ಕುರಿತು ಮಾತನಾಡುವ ಸಂದರ್ಭದಲ್ಲಿ ಭಾರತ ಜಗತ್ತಿಗೆ ಬುದ್ಧನನ್ನು ಕೊಟ್ಟಿದೆ. ಯುದ್ಧವನ್ನಲ್ಲ ಎಂದು ಹೇಳಿದ್ದರು.

ಯಾವುದೇ ದೇಶಗಳಿಗೆ ಹೋದರೂ ಪ್ರಧಾನಿ ಮೋದಿ ಅವರು ಬುದ್ಧನ ನಾಡಿನಿಂದ ಬಂದಿದ್ದೇನೆ ಎಂದು ಪದೇಪದೆ ಪ್ರಸ್ತಾಪ ಮಾಡುತ್ತಾರೆ. ಆದರೆ, ಭಾರತಕ್ಕೆ ಬಂದಾಗ ಅದನ್ನು ಮರೆಯುತ್ತಾರೆ. ಇದು ಆಗಬಾರದು ಎಂದು ಸಲಹೆ ನೀಡಿದರು.

ಓದಿ: ಧಾರವಾಡ, ಕಲಬುರಗಿ ಪೀಠಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಿಸಿದ ಹೈಕೋರ್ಟ್

ಶಾಂತಿ,ಸಹನೆ, ಕರುಣೆ, ಪ್ರೀತಿ, ಸಹಿಷ್ಣತೆಯಿಂದ ಬಾಳ್ವೆ ನಡೆಸುವ ಸಿದ್ಧಾಂತ ಬೌದ್ಧ ಧರ್ಮದ್ದಾಗಿದೆ. ಇಡೀ ಜಗತ್ತೇ ಬೌದ್ಧ ಧರ್ಮವನ್ನು ಒಪ್ಪಿದೆ. ಪ್ರಗತಿಪರವಾದ ಕರ್ನಾಟಕದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಬೌದ್ಧ, ಜೈನ ಧರ್ಮ ಅಧ್ಯಾಯವನ್ನು ಪಠ್ಯದಿಂದ ಕೈಬಿಟ್ಟಿರುವುದು ಸರಿಯಲ್ಲ.

ಹಿಂದೆ ಇದ್ದ ಪಠ್ಯವನ್ನು ಯಥಾವತ್ತಾಗಿ ಮತ್ತೆ ಅಳವಡಿಸಬೇಕು. ಕೈಬಿಟ್ಟರೆ ಕಾಂಗ್ರೆಸ್‌ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.