ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆಯ ಚುನಾವಣೆಯಾಗಿ 29 ತಿಂಗಳ ಬಳಿಕ ಸಾಮಾನ್ಯ ಸಭೆ ನಡೆಸಿ ನಗರದ ಅಭಿವೃದ್ದಿ ಹಾಗೂ ಸಮಸ್ಯೆಗಳನ್ನು ಬಗ್ಗೆ ಚರ್ಚಿಸುವ ಭಾಗ್ಯ ಸದಸ್ಯರಿಗೆ ಇಂದು ದೊರಕಿದೆ.
ಕಳೆದ 2 ತಿಂಗಳ ಹಿಂದೆಯಷ್ಟೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದು ಅಧ್ಯಕ್ಷರಾಗಿ ಗಂಗಮ್ಮ, ಉಪಾಧ್ಯಕ್ಷರಾಗಿ ಕವಿತಾ ಆಯ್ಕೆಯಾಗಿದ್ದಾರೆ. 29 ತಿಂಗಳ ಬಳಿಕ ನಡೆದ ಚೊಚ್ಚಲ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಭಾಗಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಬಗ್ಗೆ ಶಾಸಕ ಎನ್. ಮಹೇಶ್ ಮಾತನಾಡಿ 2 ತಿಂಗಳ ಹಿಂದೆಯಷ್ಟೇ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿದೆ. ಮೊದಲ ಸಾಮಾನ್ಯ ಸಭೆ ಇಂದು ನಡೆಯುತ್ತಿದೆ. ಆಯಾ ವಾರ್ಡ್ಗಳ ಸದಸ್ಯರು ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಪರಿಪೂರ್ಣ ಚರ್ಚಿಸಿ ಸರಿಪಡಿಸುವ ಕೆಲಸವಾಗಲಿ ಎಂದರು.
ಇದೇ ವೇಳೆ 31 ನಗರಸಭಾ ಸದಸ್ಯರೂ ಕೂಡ ಪ್ರಮಾಣ ವಚನ ಸ್ವೀಕರಿಸಿದರು.