ಕೊಳ್ಳೇಗಾಲ: ಸಚಿವ ಮಾಧುಸ್ವಾಮಿ ನಡೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಆರ್ಎಂಸಿ ಮಾರುಕಟ್ಟೆಯಿಂದ ಮೆರವಣಿಗೆ ಹೊರಟ ರೈತ ಸಂಘದ ಕಾರ್ಯಕರ್ತರು, ಕೊಳ್ಳೇಗಾಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸರ್ಕಲ್ನಲ್ಲಿ ಸಚಿವ ಮಾಧುಸ್ವಾಮಿ ಪ್ರತಿಕೃತಿ ಸುಡಲು ಮುಂದಾದರು. ಈ ವೇಳೆ ಪ್ರತಿಭಟನಾಕಾರನ್ನು ಪೊಲೀಸರು ತಡೆದು ಪ್ರತಿಕೃತಿ ಕಿತ್ತುಕೊಂಡ ಘಟನೆ ನಡೆದಿದೆ.
ಇದರಿಂದ ರೊಚ್ಚಿಗೆದ್ದ ರೈತರು, ರಸ್ತೆ ತಡೆ ನಡೆಸಲು ಮುಂದಾಗಿದ್ದಲ್ಲದೆ ಮಾಧುಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಸರ್ಕಾರ ಸಚಿವ ಮಾಧುಸ್ವಾಮಿಯನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ರೈತ ಸಂಘದ ಅಧ್ಯಕ್ಷ ಗೌಡೇಗೌಡ ಎಚ್ಚರಿಕೆ ನೀಡಿದರು. ನಂತರ ಪ್ರತಿಭಟನೆ ನಿಲ್ಲಿಸದ ಪ್ರತಿಭಟನಾಕರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋದರು.