ETV Bharat / state

ಕಸಾಪ ಜಿಲ್ಲಾ ಸಮ್ಮೇಳನಕ್ಕೆ ಸಂಘಟನೆಗಳ ಅಪಸ್ವರ : ಪ್ರತ್ಯೇಕ ಸಮ್ಮೇಳನ ನಡೆಸಲು ಚಿಂತನೆ

author img

By

Published : Feb 12, 2021, 11:42 AM IST

ಕಳೆದ ಬಾರಿ ಅವಕಾಶ ಸಿಗದವರಿಗೆ ಈ ಬಾರಿ ಅವಕಾಶ ನೀಡಬೇಕಿತ್ತು. ಪ್ರತಿಸಲವೂ ಸಾಹಿತ್ಯ ಸಮ್ಮೇಳನಕ್ಕೆ ಕೆಲವರ ಹೆಸರೇ ಕೇಳಿ ಬರುತ್ತದೆ. ಕಸಾಪ ಜಿಲ್ಲಾಧ್ಯಕ್ಷ ವಿನಯ್‌ ಅವರು ತಮ್ಮ ಆತ್ಮೀಯರಿಗೆ ಮಣೆ ಹಾಕಲಾಗಿದೆ ಎಂದು ಯುವ ಕವಿಗಳು ದೂರಿದ್ದಾರೆ..

ಕಸಾಪ ಜಿಲ್ಲಾ ಸಮ್ಮೇಳನಕ್ಕೆ ಸಂಘಟನೆಗಳ ಅಪಸ್ವರ
Kannada organisation disappointed about District Kannada Parishat Conference

ಚಾಮರಾಜನಗರ : ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಕಸಾಪ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಪರ ಸಂಘಟನನೆಗಳು, ಯುವ ಕವಿಗಳು ಅಪಸ್ವರ ಎತ್ತಿದ್ದಾರೆ.

ಕಸಾಪ ಜಿಲ್ಲಾ ಸಮ್ಮೇಳನಕ್ಕೆ ಸಂಘಟನೆಗಳ ಅಪಸ್ವರ..

ಇದೇ ಫೆ.15,16ರಂದು ನಡೆಯಲಿರುವ 11ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ತಮಗೆ ಬೇಕಾದವರಿಗೆ ಮಣೆ ಹಾಕಲಾಗಿದೆ. ಯುವ ಕವಿಗಳನ್ನು ಕಡೆಗಣಿಸಿದ್ದಾರೆ ಎಂದು ಕನ್ನಡಪರ ಹೋರಾಟಗಾರರು ಕಸಾಪ ಜಿಲ್ಲಾಧ್ಯಕ್ಷ ವಿನಯ್ ವಿರುದ್ಧ ಆರೋಪಿಸಿದ್ದಾರೆ.

ಸಮ್ಮೇಳನದ ಇಡೀ ಕಾರ್ಯಕ್ರಮಗಳ ಪಟ್ಟಿ ನೋಡಿದರೆ ಮುಂಬರುವ ಕಸಾಪ ಚುನಾವಣೆಯನ್ನು ಉದ್ದೇಶವಾಗಿಟ್ಟುಕೊಂಡು ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ರೂಪಿಸಲಾಗಿದೆ. ನೆಪಮಾತ್ರಕ್ಕೆ ದಲಿತ ಸಾಹಿತಿಯನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಯುವ ಕವಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಸಮ್ಮೇಳನ ಆಯೋಜನೆ ಸಂಬಂಧ ಕಸಾಪವು ಪೂರ್ವಭಾವಿ ಸಭೆ ನಡೆಸದೆ ಹೋಟೆಲ್‌ವೊಂದರಲ್ಲಿ ಕುಳಿತು ಕಾರ್ಯಕ್ರಮ ಸಿದ್ಧಪಡಿಸಿದ್ದಾರೆ. ಎಲ್ಲಾ ಸಭೆಗಳಿಗೂ ಕಸಾಪ ಸದಸ್ಯರಿಗೆ ಆಹ್ವಾನ ನೀಡುತ್ತಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಪೂರ್ವಭಾವಿ ಸಭೆಗೆ ಆಹ್ವಾನವನ್ನೇ ನೀಡಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ ಇರುವ ಕವಿಗಳು ಹಾಗೂ ಲೇಖಕರನ್ನೇ ಕವಿಗೋಷ್ಠಿಗಳಿಗೆ ಅವಕಾಶ ನೀಡಲಾಗಿದೆ.

ಕಳೆದ ಬಾರಿ ಅವಕಾಶ ಸಿಗದವರಿಗೆ ಈ ಬಾರಿ ಅವಕಾಶ ನೀಡಬೇಕಿತ್ತು. ಪ್ರತಿಸಲವೂ ಸಾಹಿತ್ಯ ಸಮ್ಮೇಳನಕ್ಕೆ ಕೆಲವರ ಹೆಸರೇ ಕೇಳಿ ಬರುತ್ತದೆ. ಕಸಾಪ ಜಿಲ್ಲಾಧ್ಯಕ್ಷ ವಿನಯ್‌ ಅವರು ತಮ್ಮ ಆತ್ಮೀಯರಿಗೆ ಮಣೆ ಹಾಕಲಾಗಿದೆ ಎಂದು ಯುವ ಕವಿಗಳು ದೂರಿದ್ದಾರೆ.

ಓದಿ: ರಾಜ್ಯಸಭೆ ಪ್ರತಿಪಕ್ಷ ನಾಯಕರಾಗ್ತಾರೆ ಮಲ್ಲಿಕಾರ್ಜುನ್‌ ಖರ್ಗೆ.. ಪಕ್ಷ ನಿಷ್ಠೆಗೆ ಮತ್ತೊಂದು ಪದವಿ ಪಕ್ಕಾ..

ಯಾವೊಂದು ಸಭೆಗೆ ಆಹ್ವಾನಿಸಿಲ್ಲ, ಸಾಹಿತ್ಯ ಸಮ್ಮೇಳನಕ್ಕೂ ಕರೆದಿಲ್ಲ, ಕನ್ನಡಪರ ಹೋರಾಟಗಾರರನ್ನು ನಿರ್ಲಕ್ಷ್ಯಿಸಿದ್ದಾರೆ. ಸದಸ್ಯರಿಗೆ ಆಹ್ವಾನ ಮಾಡಿಲ್ಲ. ಕೇಳಿದರೆ ವಾಟ್ಸ್‌ಆ್ಯಪ್​​ನಲ್ಲಿ ಕಳುಹಿಸಿದ್ದೇನೆಂಬ ಹಾರಿಕೆ ಉತ್ತರ ಬರುತ್ತದೆ ಎಂದು ಕಾವಲುಪಡೆಯ ಪದಾಧಿಕಾರಿಗಳು ಕಿಡಿಕಾರಿದ್ದಾರೆ.

ರಾಜಕೀಯ ಮಾಡುತ್ತಿರುವ ಈ ಸಮ್ಮೇಳನ ಬಹಿಷ್ಕರಿಸಿ ಎಲ್ಲರನ್ನೂ ಒಳಗೊಂಡ ಪ್ರತ್ಯೇಕ ಸಾಹಿತ್ಯ ಸಮ್ಮೇಳನ ನಡೆಸಲು ಚಿಂತನೆ ನಡೆಯುತ್ತಿದೆ‌. ಜೊತೆಗೆ ಸಮ್ಮೇಳನದಲ್ಲಿ ಕಪ್ಪು ಬಾವುಟವನ್ನು ಪ್ರದರ್ಶಿಸುತ್ತೇವೆ ಎಂದು ಕನ್ನಡಪರ ಹೋರಾಟಗಾರರು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.