ಚಾಮರಾಜನಗರ: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ಆರಂಭಿಸಿರುವ ವಿಜಯ ಸಂಕಲ್ಪ ಯಾತ್ರೆಗೆ ಇಂದು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಿದರು. ಹೆಲಿಕಾಪ್ಟರ್ ಮೂಲಕ ಮಾದಪ್ಪನ ಬೆಟ್ಟಕ್ಕೆ ಬಂದಿಳಿದ ನಡ್ಡಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನೀಲ್ ಕುಮಾರ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸ್ವಾಗತಿಸಿದರು. ಬಳಿಕ ನಡ್ಡಾ ಮಲೆಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ನಗಾರಿ ಬಾರಿಸುವ ಮೂಲಕ ಯಾತ್ರೆಗೆ ಚಾಲನೆ ಕೊಟ್ಟರು.
-
Inaugurating the Vijaya Sankalpa Ratha Yatra in Distt. Chamarajanagara, Karnataka.
— Jagat Prakash Nadda (@JPNadda) March 1, 2023 " class="align-text-top noRightClick twitterSection" data="
https://t.co/ZUDKiXriOk
">Inaugurating the Vijaya Sankalpa Ratha Yatra in Distt. Chamarajanagara, Karnataka.
— Jagat Prakash Nadda (@JPNadda) March 1, 2023
https://t.co/ZUDKiXriOkInaugurating the Vijaya Sankalpa Ratha Yatra in Distt. Chamarajanagara, Karnataka.
— Jagat Prakash Nadda (@JPNadda) March 1, 2023
https://t.co/ZUDKiXriOk
ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ನಡ್ಡಾ, "ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಪ್ರತಿ ಸ್ಥಳದಲ್ಲೂ ಜನರನ್ನು ಸಂಪರ್ಕಿಸುವ ಮೂಲಕ 'ವಿಜಯ ಸಂಕಲ್ಪ'ವನ್ನು ಮುನ್ನಡೆಸುತ್ತದೆ ಎಂದರು. ಒಂದೊಮ್ಮೆ ಜಾತೀಯತೆ, ವೋಟ್ ಬ್ಯಾಂಕ್, ಕೌಟುಂಬಿಕತೆ ಆಧಾರದ ಮೇಲೆ ರಾಜಕೀಯ ನಡೆಯುತ್ತಿದ್ದ ಕಾಲವಿತ್ತು. ಆದರೆ, ಇಂದು ಪ್ರಧಾನಿ ಮೋದಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ, ಸಬ್ ಕಾ ಪ್ರಾಯಸ್ ಎಂದು ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿದ್ದಾರೆ. ಮೋದಿಯವರ ನೇತೃತ್ವದಲ್ಲಿ ಭಾರತದ ಚಿತ್ರಣವೇ ಬದಲಾಗಿದೆ" ಎಂದು ಹೇಳಿದರು.
ಮುಂದುವರೆದು ಮಾತನಾಡಿ, "ಬಿಜೆಪಿ ಸರ್ಕಾರ ಆದಿವಾಸಿಗಳು, ಬಡವರು, ಮಹಿಳೆಯರು ಮತ್ತು ಹಿಂದುಳಿದವರಿಗಾಗಿ ಉತ್ತಮ ಕೆಲಸವನ್ನು ಮಾಡುತ್ತಿದೆ. ಇಂದು ಕೇಂದ್ರದಲ್ಲಿ ಪರಿಶಿಷ್ಟ ಪಂಗಡದ 12 ಜನರಿಗೆ ಸಚಿವ ಸ್ಥಾನವನ್ನ ಬಿಜೆಪಿ ಸರ್ಕಾರ ನೀಡಿದೆ. ಇನ್ನು 2013ರಲ್ಲಿ 4295 ಕೋಟಿ ರೂ.ಗಳಷ್ಟಿದ್ದ ಬಜೆಟ್ ಇಂದು 12,461 ಕೋಟಿ ರೂ.ಗೆ ಏರಿಕೆಯಾಗಿದೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಮೋದಿ ಸರಕಾರ ಸಾಂವಿಧಾನಿಕ ಸ್ಥಾನಮಾನ ನೀಡಿದೆ. ರಾಷ್ಟ್ರೀಯ ಫೆಲೋಶಿಪ್ ಯೋಜನೆಯಡಿ ಸುಮಾರು 18 ಸಾವಿರ ಫಲಾನುಭವಿಗಳಿಗೆ ಧನಸಹಾಯ ನೀಡಲಾಗುತ್ತಿದೆ. ಇದರೊಂದಿಗೆ ಬುಡಕಟ್ಟು ಜನಾಂಗದವರು ದೇಶಕ್ಕಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ಹಿಡಿಯಲು 27 ಬುಡಕಟ್ಟು ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗುವುದು" ಎಂದು ನುಡಿದರು.
"ಇನ್ನು ಯಡಿಯೂರಪ್ಪ ಅವರ ಆಶೀರ್ವಾದ ಮತ್ತು ಬೊಮ್ಮಾಯಿ ಅವರ ಕಠಿಣ ಪರಿಶ್ರಮದಿಂದ ಬಿಜೆಪಿ ಸರ್ಕಾರವು ಈ ಸ್ಥಳದ ಚಿತ್ರಣ ಮತ್ತು ಭವಿಷ್ಯವನ್ನು ಬದಲಾಯಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ನಡ್ಡಾ ತಿಳಿಸಿದರು. ಬಳಿಕ ಮಾಧ್ಯಮದೊಂದಿಗೆ ಸಿಎಂ ಬೊಮ್ಮಾಯಿ ಮಾತನಾಡಿ, ವಿಜಯ ಸಂಕಲ್ಪ ರಥಯಾತ್ರೆ ಮುಂಬರುವ ವಿಧಾನಸಭಾ ಚುನಾವಣೆಯ ದಿಗ್ವಿಜಯದ ಸಂಕೇತವಾಗಿದೆ. ಮತ್ತೊಮ್ಮೆ ರಾಜ್ಯದಲ್ಲಿ ಕಮಲ ಅರಳಲಿದ್ದು, ಜನಪರವಾದ ಸರ್ಕಾರ ಮುಂದುವೆರಯಲಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಗೆ ತೆರಳಲಿರುವ ಯಾತ್ರೆ ಎಲ್ಲಾ ಸಮುದಾಯದವರ ಆಶೀರ್ವಾದದೊಂದಿಗೆ ದಿಗ್ವಿಜಯ ಸಾಧಿಸಲಿದೆ ಎಂದು ಹೇಳಿದರು.
ಸಚಿವ ಸೋಮಣ್ಣ ಗೈರು: ವಿಜಯ ಸಂಕಲ್ಪ ಆಯತ್ರೆ ಚಾಲನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಗೈರಾಗಿದ್ದು, ಬಿಜೆಪಿಯಲ್ಲಿನ ಭಿನ್ನಮತ, ಅಸಮಾಧಾನಕ್ಕೆ ಕನ್ನಡಿ ಹಿಡಿದಿದೆ. ಬೊಮ್ಮಾಯಿ ಅವರು ಅನುದಾನ ಕೊಟ್ಟಿಲ್ಲ ಜೊತೆಗೆ ಬೇರೆ ಬೇರೆ ಕಾರಣಗಳಿಂದ ಪಕ್ಷದ ವಿರುದ್ಧ ಸೋಮಣ್ಣ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.
ಮಾದಪ್ಪನ ಮುಂದೆ ನಟ ಜಗ್ಗೇಶ್ ಧ್ಯಾನ: ವಿಜಯ ಸಂಕಲ್ಪ ಯಾತ್ರೆ ಚಾಲನೆ ಪ್ರಯುಕ್ತ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಇದರ ಜೊತೆಗೆ, ಮಹದೇಶ್ವರನ ಮುಂದೆ 15 ನಿಮಷದ ವರೆಗೆ ಕುಳಿತ ಜಗ್ಗೇಶ್ ಧ್ಯಾನ ಮಾಡಿದರು.
ಇದನ್ನೂ ಓದಿ: ಸರ್ಕಾರಿ ನೌಕರರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಲಾಗುತ್ತಿದೆ: ಸಿದ್ದರಾಮಯ್ಯ ವಾಗ್ದಾಳಿ