ಚಾಮರಾಜನಗರ: ಚುನಾವಣೆಗೆ ಇನ್ನೂ ಒಂದು ವರ್ಷವಿರುವಾಗಲೇ ಹನೂರು ಬಿಜೆಪಿ ಟಿಕೆಟ್ ಪಡೆಯಲು ಹಲವರು ಹವಣಿಸುತ್ತಿದ್ದಾರೆ. ಈ ರೇಸಿನಲ್ಲಿ ಮುಂಚೂಣಿಯಲ್ಲಿರುವ ಜನಧ್ವನಿ ವೆಂಕಟೇಶ್ ಸೇವೆಯ ಮೂಲಕ ಜನರ ಮನಗೆಲ್ಲುವ ತಂತ್ರಕ್ಕೆ ಮುಂದಾಗಿದ್ದಾರೆ. ಹನೂರು ಪಟ್ಟಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿರುವ ಇವರು ವರಿಷ್ಠರ ವಿಶ್ವಾಸ ಗೆಲ್ಲುವ ಕಸರತ್ತು ಮಾಡುತ್ತಿದ್ದಾರೆ.
ಒಂದೆಡೆ ಪರಿಮಳ ನಾಗಪ್ಪ ಪುತ್ರ ಪ್ರೀತಂ ನಾಗಪ್ಪ ಮತ್ತೊಂದೆಡೆ ಜನಧ್ವನಿ ವೆಂಕಟೇಶ್ ಟಿಕೆಟ್‌ಗಾಗಿ ಸಾಕಷ್ಟು ಪೈಪೋಟಿ ನಡೆಸುತ್ತಿದ್ದಾರೆ. ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳಿಂದ ನೂರಾರು ಮಂದಿಗೆ ನೌಕರಿ ಕೊಡಿಸುವ ಜೊತೆಗೆ ಪಕ್ಷಕ್ಕೂ ವೆಂಕಟೇಶ್ ಮೈಲೇಜ್ ತಂದುಕೊಡುವ ಕೆಲಸ ಮಾಡಿದ್ದಾರೆ. ಉದ್ಯೋಗ ಮೇಳದ ಸ್ಟಾಲ್ಗಳಲ್ಲಿ ಕೇಸರಿಮಯ ವಾತಾವರಣ ಸೃಷ್ಟಿದ್ದಾರೆ.
ಅಂಗವಿಕಲರು, ಯುವತಿಯರ ಕೈ ಹಿಡಿದ ಮೇಳ: ಇಂದು ಆಯೋಜನೆಯಾಗಿದ್ದ ಉದ್ಯೋಗ ಮೇಳದಲ್ಲಿ ಆಕ್ಸಿಸ್, ಎಚ್ಡಿಎಫ್ಸಿ, ಇನ್ಫೋಸಿಸ್, ವಿಪ್ರೋ, ಬಜಾಜ್, ಮುತ್ತೂಟ್, ವರ್ಕ್ ಫಾರ್ ನೀಡಿ, ವೈದ್ಯಕೀಯ ಸಂಸ್ಥೆಗಳು ಸೇರಿದಂತೆ 140 ಕಂಪನಿಗಳು ಮೇಳದಲ್ಲಿ ಭಾಗಿಯಾಗಿದ್ದವು. ಇವುಗಳಿಗೆ 20 ಮಂದಿ ಅಂಗವಿಕಲರು, 50 ಮಂದಿ ಯುವತಿಯರು ಸೇರಿದಂತೆ ನೂರಾರು ಜನರಿಗೆ ಬೆಂಗಳೂರು, ಮೈಸೂರು ಹಾಗೂ ಚಾಮರಾಜನಗರದಲ್ಲಿ ನೌಕರಿ ಸಿಕ್ಕಿದೆ.
ಇದನ್ನೂ ಓದಿ: ಈ ಸಲ ಕಪ್ ನಮ್ದೆ ಅಂತಾ ಕಾರನ್ನು ಅಲಂಕರಿಸಿದ ಸಾಗರದ ಕನ್ನಡಾಭಿಮಾನಿ..