ETV Bharat / state

ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ: ಎನ್​​.ಮಹೇಶ್​​ - undefined

ಲೋಕಸಭಾ ಚುನಾವಣೆಗಿಂತ ಮೊದಲು ನಾನು ಕುಮಾರಸ್ವಾಮಿ ಸರ್ಕಾರಕ್ಕೆ ಬೆಂಬಲ ನೀಡಿದ್ದೆ. ಚುನಾವಣೆಯ ವೇಳೆ ನಾನು ಸಮ್ಮಿಶ್ರ ಸರ್ಕಾರದಿಂದ ಹೊರಗೆ ಬಂದಿದ್ದೀನಿ. ಸದ್ಯಕ್ಕೆ ನಾನು ಸ್ವತಂತ್ರವಾಗಿದ್ದು, ಬೆಹನ್​ ಜೀ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧ ಎಂದು ಎನ್.ಮಹೇಶ್​ ಸ್ಪಷ್ಟನೆ ನೀಡಿದ್ದಾರೆ.

ಎನ್.ಮಹೇಶ್
author img

By

Published : May 25, 2019, 7:36 PM IST

Updated : May 25, 2019, 9:30 PM IST

ಚಾಮರಾಜನಗರ: ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಎಸ್​ಪಿ ಬೆಂಬಲ ನೀಡಲಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಇದರ ಕುರಿತು ಯಾವುದೇ ಮಾಹಿತಿ ಇಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಎನ್.ಮಹೇಶ್ ತಿಳಿಸಿದ್ದಾರೆ.

ಎನ್​​.ಮಹೇಶ್​​

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗಿಂತ ಮೊದಲು ನಾನು ಕುಮಾರಸ್ವಾಮಿ ಸರ್ಕಾರಕ್ಕೆ ಬೆಂಬಲ ನೀಡಿದ್ದೆ. ಚುನಾವಣೆಯ ವೇಳೆ ನಾನು ಸಮ್ಮಿಶ್ರ ಸರ್ಕಾರದಿಂದ ಹೊರಗೆ ಬಂದಿದ್ದೀನಿ. ಸದ್ಯಕ್ಕೆ ನಾನು ಸ್ವತಂತ್ರ ಎಂದರು.

ಕೇಂದ್ರದಲ್ಲಿ ಮಾಯವತಿ ಅವರು ಬಿಜೆಪಿಗೆ ಬೆಂಬಲ ಸೂಚಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನು ಬಹುಜನ್​ ಪಕ್ಷದ ಶಿಸ್ತಿನ ಶಿಪಾಯಿಯಾಗಿ ನಮ್ಮ ಹೈಕಮಾಂಡ್​ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧ. ಬೆಂಬಲ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಚರ್ಚೆ ಆಗಿಲ್ಲ. ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ ಎಂದರು.

ಒಂದು ವೇಳೆ ಮಾಯವತಿ ಅವರೇ ಬೆಂಬೆಲ ಸೂಚಿಸಿದರೆ ಏನು ಮಾಡುತ್ತೀರಾ ಎಂಬುದಕ್ಕೆ ಆಮೇಲೆ ನೋಡೋಣ. ಬೆಹನ್​ ಜೀ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧ ಎಂದು ಸ್ಪಷ್ಟಪಡಿಸಿದರು.

Intro:ಬಿಜೆಪಿಗೆ ಬಿಎಸ್ಪಿ ಬೆಂಬಲ ಮಾತಿಗೆ ಶಾಸಕ ಎನ್. ಮಹೇಶ್ ಹೇಳಿದ್ದೇನು!?

ಚಾಮರಾಜನಗರ: ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಎಸ್ ಪಿ ಬೆಂಬಲ ನೀಡಲಿದೆ ಎಂಬ ಮಾತಿಗೆ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಎನ್.ಮಹೇಶ್ ತಿಳಿಸಿದ್ದಾರೆ.

Body:ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರಸ್ತುತ ಬಿಜೆಪಿಗೆ ಎನ್.ಮಹೇಶ್ ಬೆಂಬಲ ನೀಡುತ್ತಾರೆನ್ನುವುದು ರೂಮರ್, ಬಿಎಸ್ ಪಿ ವರಿಷ್ಠೆ ಮಾಯಾವತಿ ಹೇಳಿದರೆ ಬಿಜೆಪಿಗೆ ಬೆಂಬಲ ಖಂಡಿತ ಎಂದು ಹೇಳಿಕೆ ನೀಡಿದ್ದಾರೆ.

ಲೋಕ ಚುನಾವಣೆಗೂ ಮುನ್ನ ಕುಮಾರಸ್ವಾಮಿ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದೆ. ಚುನಾವಣೆಯಲ್ಲಿ ಮೈತ್ರಿ ಸರ್ಕಾರದಿಂದ ಹೊರ ಬಂದಿದ್ದು, ನಾನೀಗ ಸ್ವತಂತ್ರ, ನನ್ನ ಬೆಂಬಲ ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Conclusion:ಬಿಜೆಪಿಯವರು ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ, ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
Last Updated : May 25, 2019, 9:30 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.