ಚಾಮರಾಜನಗರ: ತೀವ್ರ ಕುತೂಹಲ ಕೆರಳಿಸಿರುವ ವಿಶ್ವಾಸ ಮತಯಾಚನೆಗೆ ಕೊಳ್ಳೇಗಾಲದ ಬಿಎಸ್ಪಿ ಶಾಸಕ ತಟಸ್ಥ ರಾಗಿರಲು ತೀರ್ಮಾನಿಸಿದ್ದು,ಎರಡೂ ಪಕ್ಷಗಳಿಗೂ ತಮ್ಮ ಬೆಂಬಲವಿಲ್ಲ ಎಂದಿದ್ದಾರೆ.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಹೇಶ್, ಪಕ್ಷದ ವರಿಷ್ಠರಿಂದ ತಟಸ್ಥರಾಗಿರುವಂತೆ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ಪರವೂ ನನ್ನ ಬೆಂಬಲವಿಲ್ಲ ಎಂದರು.
ಖಾಸಗಿ ಕೆಲಸದ ಹಿನ್ನೆಲೆಯಲ್ಲಿ ನಾನು ಎರಡು ದಿನ ಕಲಾಪದಲ್ಲಿ ಭಾಗವಹಿಸಲಿಲ್ಲ. ಇನ್ನೆರಡು ದಿನವೂ ನಾನು ಅಸೆಂಬ್ಲಿಗೆ ಹೋಗುವುದಿಲ್ಲ. ಕ್ಷೇತ್ರದಲ್ಲಿದ್ದು ಜನರ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.