ಕೊಳ್ಳೇಗಾಲ: 8 ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ನನ್ನ ಪತಿ 10 ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಮಹಿಳೆಯೋರ್ವರು ಪಟ್ಟಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ತಾಲೂಕಿನ ಮುಳ್ಳೂರು ಗ್ರಾಮದ ಪ್ರಸಾದ್ (25) ನಾಪತ್ತೆಯಾಗಿರುವ ಯುವಕ. ಇವರು ಕಳೆದ 8 ತಿಂಗಳ ಹಿಂದಷ್ಟೇ ಹೊಸ ಹಂಪಾಪುರದ ಮಂಗಳಗೌರಿ ಎಂಬಾಕೆ ಮದುವೆಯಾಗಿದ್ದರು. ಕಳೆದ ಫೆ.16 ರಂದು ಕೆಲಸಕ್ಕೆ ಹೋದ ಪ್ರಸಾದ್ ಮತ್ತೆ ಮನೆಗೆ ಬಂದಿಲ್ಲ. ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಪತಿಯನ್ನು ಹುಡುಕಿ ಕೊಡುವಂತೆ ಮಂಗಳಗೌರಿ ದೂರು ನೀಡಿದ್ದಾರೆ.
ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.