ETV Bharat / state

ಪತ್ನಿ ಕೊಂದು ಶವಪೂಜೆಗೆ ತಯಾರಿ ನಡೆಸಿದ್ದ ಪತಿರಾಯ! - ಚಾಮರಾಜನಗರ ಅಪರಾಧ ಸುದ್ದಿ,

ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿಯನ್ನು ಕೊಂದು ಶವಪೂಜೆಗೆ ತಯಾರಿ ನಡೆಸಿದ್ದ ಘಟನೆ ಚಾಮರಾಜನಗರಲ್ಲಿ ಕಂಡು ಬಂದಿದೆ.

Husband killed to his wife, Husband killed to his wife in Chamarajanagar, Chamarajanagar crime news, Chamarajanagar murder news, ಪತ್ನಿ ಕೊಂದು ಶವಪೂಜೆಗೆ ತಯಾರಿ ನಡೆಸಿದ್ದ ಪತಿರಾಯ, ಹೆಂಡ್ತಿಯನ್ನು ಕೊಂದ ಗಂಡ, ಚಾಮರಾಜನಗರದಲ್ಲಿ ಪತ್ನಿಯನ್ನು ಕೊಲೆ ಮಾಡಿದ ಪತಿ, ಚಾಮರಾಜನಗರ ಅಪರಾಧ ಸುದ್ದಿ, ಚಾಮರಾಜನಗರ ಕೊಲೆ ಸುದ್ದಿ,
ಪತ್ನಿ ಕೊಂದು ಶವಪೂಜೆಗೆ ತಯಾರಿ ನಡೆಸಿದ್ದ ಪತಿರಾಯ
author img

By

Published : Oct 24, 2020, 3:46 PM IST

ಚಾಮರಾಜನಗರ: ಕೌಟಂಬಿಕ ಕಲಹ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಂದಿರುವ ಘಟನೆ ಮಲೆಮಹದೇಶ್ವರ ಬೆಟ್ಟದ ಆಣೆಹೊಲ ಎಂಬಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಮಹಾದೇವ ತನ್ನ ಪತ್ನಿ ಸಿದ್ದಮ್ಮ(28) ಳನ್ನು ಕೊಲೆ ಮಾಡಿದ್ದಾನೆ. ಆರೋಪಿ ಮಹಾದೇವ ಕುಡಿತದ ಚಟಕ್ಕೆ ದಾಸನಾಗಿದ್ದ. ಕೊಡಗಿನಲ್ಲಿ ಕೂಲಿ ಮಾಡುತ್ತಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮಕ್ಕೆ ಹಿಂತಿರುಗಿ ಬಂದಿದ್ದ ಎಂದು ತಿಳಿದುಬಂದಿದೆ.

ಶುಕ್ರವಾರ ಸಂಜೆಯೂ ಕುಡಿದು ಬಂದ ಮಹಾದೇವ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸುತ್ತಿಗೆ ಮತ್ತು ಮಚ್ಚಿನಿಂದ ತಲೆಗೆ ಹೊಡೆದು ಕೊಂದಿದ್ದಾನೆ. ಬಳಿಕ, ಪತ್ನಿಯ ಕಾಲುಗಳನ್ನು ಮಡಚಿ, ಅಗರಬತ್ತಿ ಹಚ್ಚಿ ಕುಳಿತಿದ್ದ ವೇಳೆ ಮಗ ಮನೋಜ್ ಮನೆಗೆ ಬಂದು ತಾಯಿ ಶವ ಕಂಡು ಅಳತೊಡಗಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ಮೃತಳ ಅಣ್ಣ ನಾಗ ಎಂಬಾತ ದೂರು ನೀಡಿದ್ದು, ಪತಿಯನ್ನು ಮಹದೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ‌.‌

ಈ ಘಟನೆ ಕುರಿತು ಮಹದೇಶ್ವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.