ETV Bharat / state

ಚಾಮರಾಜನಗರ ಹಳೆ ಆಸ್ಪತ್ರೆಯಲ್ಲಿ ಬಾಣಂತಿಯರಿಗಿಲ್ಲ ಕುಡಿಯುವ ನೀರು ; ನೂತನ ಆಸ್ಪತ್ರೆಯಲ್ಲೂ ಅವ್ಯವಸ್ಥೆ - ಚಾಮರಾಜನಗರ ಸರ್ಕಾರಿ ಆಸ್ಪತ್ರೆ ಕುಡಿಯುವ ನೀರಿನ ಸಮಸ್ಯೆ

'ಬಾಣಂತಿಯರಿಗೆ ಬಿಸಿ ನೀರೇ ಆಧಾರ. ಊಟ-ತಿಂಡಿ ಕೊಡುತ್ತಾರೆ. ಆದರೆ, ಕುಡಿಯಲು ನೀರನ್ನೇ ಕೊಡಲ್ಲ. ಹೋಟೆಲ್‌ಗಳಿಗೆ ಹೋದರೆ ಅವರೂ ನೀರು ಕೊಡಲು ಸತಾಯಿಸುತ್ತಾರೆ. ಕೆಲವರು 10 ರೂ. ಪಡೆಯುತ್ತಾರೆ. ಒಂದು ವಾರಗಳಿಂದ ಬೆಳಗ್ಗೆ-ಸಂಜೆ ಬಾಟೆಲ್​ನಲ್ಲಿ ನೀರು ತರುತ್ತಿದ್ದೇನೆ' ಎಂದು ಅಗರ ಗ್ರಾಮದ ರಾಚಯ್ಯ ಅಳಲು ತೋಡಿಕೊಂಡಿದ್ದಾರೆ..

hospital
ಆಸ್ಪತ್ರೆ
author img

By

Published : Nov 17, 2021, 10:30 PM IST

ಚಾಮರಾಜನಗರ : ಜಿಲ್ಲೆಯ ಹಳೆ ಜಿಲ್ಲಾಸ್ಪತ್ರೆಯಲ್ಲಿನ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ಕುಡಿಯಲು ಬಿಸಿ ನೀರು (Hot water scarcity) ಸಿಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.

ಜಿಲ್ಲಾಸ್ಪತ್ರೆಯಲ್ಲಿ ಕುಡಿಯಲು ಬಿಸಿನೀರು ಸಿಗದೇ ಬಾಣಂತಿಯರ ಆರೈಕೆ ಮಾಡಲು ಸಂಬಂಧಿಕರು ಪರದಾಡುತ್ತಿದ್ದಾರೆ. ಅಲ್ಲದೇ, ಖಾಲಿ ಬಾಟಲ್​ಗಳನ್ನು ಹಿಡಿದು ಹೋಟೆಲ್​ಗಳಿಗೆ ಅಲೆದಾಡುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಬಿಸಿ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರು ಮಾತನಾಡಿದ್ದಾರೆ..

'ಬಾಣಂತಿಯರಿಗೆ ಬಿಸಿನೀರೇ ಆಧಾರ. ಊಟ-ತಿಂಡಿ ಕೊಡುತ್ತಾರೆ. ಆದರೆ, ಕುಡಿಯಲು ನೀರನ್ನೇ ಕೊಡಲ್ಲ. ಹೋಟೆಲ್​ಗಳಿಗೆ ಹೋದರೆ ಅವರೂ ನೀರು ಕೊಡಲು ಸತಾಯಿಸುತ್ತಾರೆ. ಕೆಲವರು 10 ರೂ. ಪಡೆಯುತ್ತಾರೆ.

ಒಂದು ವಾರಗಳಿಂದ ಬೆಳಗ್ಗೆ-ಸಂಜೆ ಬಾಟೆಲ್​ನಲ್ಲಿ ನೀರು ತರುತ್ತಿದ್ದೇನೆ' ಎಂದು ಅಗರ ಗ್ರಾಮದ ನಿವಾಸಿ ರಾಚಯ್ಯ ಅಳಲು ತೋಡಿಕೊಂಡಿದ್ದಾರೆ.

ನೂತನ ಆಸ್ಪತ್ರೆಯಲ್ಲೂ ಅವ್ಯವಸ್ಥೆ

ಚಾಮರಾಜನಗರ ನೂತನ ಆಸ್ಪತ್ರೆ ರಾಷ್ಟ್ರಪತಿಗಳಿಂದ ಉದ್ಘಾಟನೆಯಾಗಿದೆ. ಆದರೆ, ಹಳೆ ಆಸ್ಪತ್ರೆಯ ಅವ್ಯವಸ್ಥೆಯೇ ದೊಡ್ಡಾಸ್ಪತ್ರೆಯಲ್ಲಿ ಮುಂದುವರೆದಿದೆ. ರೋಗಿಗಳು ಸರಿಯಾದ ಸೇವೆ ಸಿಗದೆ ಹೈರಣಾಗಿದ್ದಾರೆ.

ನೂರಾರು ಕೋಟಿ ವೆಚ್ಚದ ನೂತನ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆ ಇಲ್ಲ. ಹೀಗಾಗಿ, ನೆಲದ ಮೇಲೆ ಮಲಗಿ, ವೈದ್ಯರನ್ನು‌ ಕಾಣಬೇಕಿದೆ.

ಒಪಿಡಿ ಕಾರ್ಡ್ ಪಡೆಯಲು ಒಂದೇ ಕೌಂಟರ್ ವ್ಯವಸ್ಥೆ ಮಾಡಿರುವುದರಿಂದ ಕನಿಷ್ಠ ಅರ್ಧ ಗಂಟೆ ಸಾಲಿನಲ್ಲಿ ನಿಲ್ಲಬೇಕಿರುವುದು ಸಿಮ್ಸ್ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ವೈದ್ಯರು ಸಿಗದ ಆರೋಪ: ಇಲ್ಲಿನ ವೈದ್ಯರು ಸಮಯ ಪಾಲನೆ ಮಾಡದ ಬಗ್ಗೆ ರೋಗಿಗಳ ಸಂಬಂಧಿಕರು ಗಂಭೀರ ಆರೋಪ ಮಾಡುತ್ತಿದ್ದಾರೆ. ಮಧ್ಯಾಹ್ನ 1ರಿಂದ 1.30ಕ್ಕೆ ಊಟಕ್ಕೆ ಹೋಗುವ ವೈದ್ಯರು ಎರಡು ತಾಸಾದರೂ ಬರುವುದಿಲ್ಲವಂತೆ. ಕೆಲ ವಿಭಾಗಗಳಲ್ಲಂತೂ ವೈದ್ಯರನ್ನು ಕಾಣಬೇಕಾದರೆ ತಪಸ್ಸು ಮಾಡಬೇಕಾದ ಪರಿಸ್ಥಿತಿ ಮುಂದುವರೆದಿದೆ.

ಪಿಸಿಯೋಥೆರಪಿ, ಆಸ್ಪತ್ರೆ ಔಷಧ ವಿಭಾಗ, ಸ್ಕ್ಯಾನಿಂಗ್ ವಿಭಾಗದಲ್ಲಿ ಸೇವೆ ದೂರದ ಮಾತಾಗಿದೆ. ಕೆಲವೊಮ್ಮೆ ಹಳೆ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ವಿಪರ್ಯಾಸ ಎದುರಾಗುತ್ತಿದೆ. ನೂತನ ಆಸ್ಪತ್ರೆಯಲ್ಲೂ ರೋಗಿಗಳಿಗೆ ಸೇವೆ ಗಗನಕುಸುಮವಾಗಿದೆ. ಜನಪ್ರತಿನಿಧಿಗಳು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಓದಿ: ಹೈಕೋರ್ಟ್ ತಳಮಹಡಿ ಕಚೇರಿ ಸ್ಥಳಾಂತರಕ್ಕೆ KGID ಕಟ್ಟಡ ನೀಡುವಂತೆ ಸರ್ಕಾರಕ್ಕೆ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.