ETV Bharat / state

ಧಾರಾಕಾರ ಮಳೆ: ಹನೂರಿನ ಸೇತುವೆ ಮುಳುಗಡೆ, ಗುಂಡ್ಲುಪೇಟೆ ಶಾಲೆಗೆ ನುಗ್ಗಿದ ನೀರು - ಚಾಮರಾಜನಗರ ಜಿಲ್ಲೆಯ ಹನೂರು

ಚಾಮರಾಜನಗರ ಜಿಲ್ಲೆಯ ಹನೂರು ಹಾಗೂ ಗುಂಡ್ಲುಪೇಟೆ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿದೆ.

Heavy rain in Chamarajanagar
ಧಾರಕಾರ ಮಳೆ: ಹನೂರಿನ ಸೇತುವೆ ಮುಳುಗಡೆ, ಗುಂಡ್ಲುಪೇಟೆ ಶಾಲೆಗೆ ನೀರು ನುಗ್ಗಿ ಅವಾಂತರ
author img

By

Published : Jul 23, 2020, 9:52 PM IST

ಚಾಮರಾಜನಗರ: ಜಿಲ್ಲೆಯ ಹನೂರು ಹಾಗೂ ಗುಂಡ್ಲುಪೇಟೆ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿದೆ.

ಧಾರಕಾರ ಮಳೆ: ಹನೂರಿನ ಸೇತುವೆ ಮುಳುಗಡೆ, ಗುಂಡ್ಲುಪೇಟೆ ಶಾಲೆಗೆ ನೀರು ನುಗ್ಗಿ ಅವಾಂತರ

ಹನೂರು ತಾಲೂಕಿನ ಬೋರೆದೊಡ್ಡಿ ಸಮೀಪದ ಜಡೆತಡಿಹಳ್ಳ ಸೇತುವೆ ಮುಳುಗಡೆಯಾಗಿ ಬರೋಬ್ಬರಿ 4 ತಾಸು ಸಂಚಾರಕ್ಕೆ ತಡೆಯಾಗಿತ್ತು.‌ ಸೇತುವೆ ಮೇಲೆ ಭಾರೀ ಗಾತ್ರದ ಮರದ ರೆಂಬೆ ಬಿದ್ದು ಮತ್ತಷ್ಟು ಫಜೀತಿ ಉಂಟುಮಾಡಿತ್ತು. ಬಳಿಕ ಪರಿಸರ ಪ್ರೇಮಿ ಕೃಷ್ಣ ಮತ್ತಿತರರು ಜೆಸಿಬಿ ಮೂಲಕ ಮರದ ರೆಂಬೆ ಸ್ಥಳಾಂತರಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗುಂಡ್ಲುಪೇಟೆಯಲ್ಲೂ ಅಬ್ಬರದ ಮಳೆ ಸುರಿದಿದ್ದು, ಸುತ್ತಮುತ್ತಲಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಪಟ್ಟಣದ ಪೃಥ್ವಿ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಮಳೆನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.