ETV Bharat / state

ಜಪಾನ್​ ಕ್ರೀಡಾಕೂಟಕ್ಕೆ ಹೆಡ್‌ಕಾನ್ಸ್​​​​​ಟೇಬಲ್.. ಓಟದಲ್ಲೇ ಬೆರಗು ಮೂಡಿಸುವ ಪೊಲೀಸಪ್ಪ.. - ಪೊಲೀಸ್ ಹೆಡ್ ಕಾನ್ಸ್‌ಟೇಬಲ್

1998ರಲ್ಲಿ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ 100 ಮೀ‌ಟರ್‌ ಓಟದ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದರಿಂದ ಉತ್ತೇಜಿತರಾಗಿ ಕಳೆದ 23 ವರ್ಷಗಳಿಂದ ಓಟದ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡುತ್ತಾ ಬಂದಿದ್ದಾರೆ. ಎಷ್ಟೇ ಕಷ್ಟವಾದರೂ ಸರಿಯೇ ಜಪಾನ್​​ನಲ್ಲಿ ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸ ಹೊಂದಿದ್ದಾರೆ..

head-constable-from-chamarajnagara-has-been-selected-for-japan-games
ಜಪಾನ್​ ಕ್ರೀಡಾಕೂಟಕ್ಕೆ ಹೆಡ್ ಕಾನ್ಸ್​​​​​ಟೇಬಲ್​​ ಆಯ್ಕೆ
author img

By

Published : Jul 3, 2021, 4:57 PM IST

ಚಾಮರಾಜನಗರ : ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಸಿಕ್ಕ ಒಂದು ಗೆಲುವಿನಿಂದ ಸ್ಫೂರ್ತಿಗೊಂಡ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ನಿರಂತರ ಪ್ರಯತ್ನ, ತಯಾರಿ ಬಳಿಕ ಈಗ ವಿಶ್ವಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಚಾಮರಾಜನಗರ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್‌ಟೇಬಲ್ ಕೃಷ್ಣಪ್ಪ ಎಂಬುವರು 2022ರ ಜೂನ್​ ವೇಳೆ ಜಪಾನ್​​​​ನಲ್ಲಿ ನಡೆಯುವ ವಿಶ್ವ ಮಟ್ಟದ ಓಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, 45 ವರ್ಷ ಮೇಲ್ಪಟ್ಟವರ 400 ಮೀ., 800, 1,500‌ ಮೀಟರ್​​​ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಜಪಾನ್​ ಕ್ರೀಡಾಕೂಟಕ್ಕೆ ಹೆಡ್ ಕಾನ್ಸ್​​​​​ಟೇಬಲ್​​ ಆಯ್ಕೆ

ಕಳೆದ ಮಾರ್ಚ್‌ 13ರಂದು ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕದ ವತಿಯಿಂದ ಆಯೋಜಿಸಿದ್ದ 2ನೇ ರಾಜ್ಯ ಮಟ್ಟದ ಮಾಸ್ಟರ್ ಕ್ರೀಡಾಕೂಟದಲ್ಲಿ 400, 800 ಹಾಗೂ 1,500 ಮೀಟರ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು.‌ ರಾಷ್ಟ್ರಮಟ್ಟದ ಕ್ರೀಡಾಕೂಡ ಕೊರೊನಾ ಕಾರಣಕ್ಕೆ ರದ್ದಾಗಿದ್ದರಿಂದ ಕಡಿಮೆ ಅವಧಿಯಲ್ಲಿ ಓಡಿದ ಇವರನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗಿದೆ.

ಕೃಷ್ಣಪ್ಪ ಅವರು 400 ಮೀ. ಓಟವನ್ನು 57 ಸೆಕೆಂಡ್​​ಗಳಲ್ಲಿ, 800 ಮೀ. ಓಟವನ್ನು 2.20 ನಿಮಿಷಗಳಲ್ಲಿ ಹಾಗೂ 1,500 ಮೀ. ಓಟವನ್ನು 4.49 ನಿಮಿಷಗಳಲ್ಲಿ ಓಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಗೆಲ್ಲಲ್ಲೇಬೇಕೆಂದು ಪಣ ತೊಟ್ಟಿರುವ ಇವರು ನಿತ್ಯ 6 ಕಿ.ಮೀ ಓಟದ ಅಭ್ಯಾಸ ನಡೆಸುತ್ತಿದ್ದಾರೆ.

1998ರಲ್ಲಿ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ 100 ಮೀ‌. ಓಟದ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದರಿಂದ ಉತ್ತೇಜಿತರಾಗಿ ಕಳೆದ 23 ವರ್ಷಗಳಿಂದ ಓಟದ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡುತ್ತಾ ಬಂದಿದ್ದಾರೆ. ಎಷ್ಟೇ ಕಷ್ಟವಾದರೂ ಸರಿಯೇ ಜಪಾನ್​​ನಲ್ಲಿ ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡರು. ಅಲ್ಲದೆ ಇವರ ಸಾಧನೆಗೆ ಪೊಲೀಸ್ ಇಲಾಖೆಯಿಂದಲೂ ಪ್ರೋತ್ಸಾಹ ನೀಡುತ್ತಿದ್ದಾರೆ.

ಬೇಕಿದೆ ನೆರವು : ಕೃಷ್ಣಪ್ಪ ಅವರು ಜಪಾನ್​​ಗೆ ತೆರಳಲು 2 ರಿಂದ 3 ಲಕ್ಷ ರೂ. ಅಗತ್ಯವಿದ್ದು, ರಾಜ್ಯದ ಕ್ರೀಡಾ ಇಲಾಖೆಯು 50 ಸಾವಿರ ರೂ‌. ನೀಡುವ ಭರವಸೆ ನೀಡಿದೆ. ಚಾಮರಾಜನಗರ ಎಸ್​​​ಪಿ ಅವರು ನೆರವಿನ ಭರವಸೆ ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸೇರಿದಂತೆ ಇನ್ನಿತರ ದಾನಿಗಳ ನೀರಿಕ್ಷೆಯಲ್ಲಿದ್ದಾರೆ.

ಓದಿ: ಮೇಕೆದಾಟು ಯೋಜನೆ : ತಮಿಳುನಾಡು ಸಿಎಂಗೆ ಪತ್ರ ಬರೆದ ಸಿಎಂ ಬಿಎಸ್​​ವೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.