ಚಾಮರಾಜನಗರ: ರಾತ್ರಿಪಾಳಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹನೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಹರಿಪ್ರಸಾದ್ (42) ಮೃತ ಹೆಡ್ ಕಾನ್ಸ್‌ಟೇಬಲ್. ಚಾಮರಾಜನಗರ ತಾಲೂಕಿನ ಬೂದಂಬಳಿ ಗ್ರಾಮದ ಹರಿಪ್ರಸಾದ್, ಈ ಹಿಂದೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ನವೆಂಬರ್ನಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಬಡ್ತಿ ಪಡೆದು ಹನೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.
ಕಳೆದ 5 ತಿಂಗಳಿನಿಂದ ಹನೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಗುರುವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಓದಿ: ಕೊರೊನಾ ತಗುಲಿರುವುದು ಗೊತ್ತಿದ್ರೂ ಮದುವೆಯಲ್ಲಿ ಭಾಗಿ: ಹೆಚ್ಚಿದ ಆತಂಕ!