ETV Bharat / state

ಗುಂಡ್ಲುಪೇಟೆ: ಹುಲಿ ಉಪಟಳ ಜಾಗೃತಿಗಾಗಿ ಬೀದಿ ನಾಟಕ - street drama to be wary of the tiger

ಗುಂಡ್ಲುಪೇಟೆಯ ಕುಂದುಕೆರೆ ವಲಯದ ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿ ಉಪಟಳ ಹೆಚ್ಚಾಗಿದೆ. ಹೀಗಾಗಿ ಹುಲಿ ಉಪಟಳ ಕುರಿತು ಅರಣ್ಯ ಇಲಾಖೆ ವತಿಯಿಂದ ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಯಿತು.

ಹುಲಿಯ ಬಗ್ಗೆ ಎಚ್ಚರದಿಂದಿರಲು ಬೀದಿ ನಾಟಕ
ಹುಲಿಯ ಬಗ್ಗೆ ಎಚ್ಚರದಿಂದಿರಲು ಬೀದಿ ನಾಟಕ
author img

By

Published : May 6, 2020, 11:33 PM IST

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದೆ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟು ಹುಲಿಯ ಸರಹದ್ದಿನ ವ್ಯಾಪ್ತಿಯನ್ನು ಬದಲಾಯಿಸಲು ಶ್ರಮವಹಿಸುತ್ತಿದ್ದಾರೆ. ಇದರ ಜೊತೆಗೆ ಹುಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅರಣ್ಯ ಇಲಾಖೆ ವತಿಯಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು.

ಹುಲಿ, ಚಿರತೆ ಜಾನುವಾರುಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಜಾನುವಾರುಗಳ ರಕ್ಷಣೆಗಾಗಿ ಹುಲಿಗೆ ಕಲ್ಲು ಹೊಡೆಯುವುದು, ಚೀರಾಟ ಮಾಡುವುದನ್ನು ಮಾಡಿದರೆ ಮನುಷ್ಯನ ಮೇಲೆ ಅದು ದಾಳಿ ಮಾಡುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ಕಾಡಂಚಿಗೆ ಜಾನುವಾರುಗಳನ್ನು ಮೇಯಲು ಬಿಡಬೇಡಿ. ಜಮೀನುಗಳನ್ನು ಪಾಳು ಬಿಡಬಾರದು ಎಂಬುದನ್ನು ನಾಟಕದ ಮೂಲಕ ತಿಳಿಸುವ ಪ್ರಯತ್ನ ಮಾಡಲಾಯಿತು. ಕಾಡಂಚಿನ ಗ್ರಾಮದ ಯುವಕರು ಸಹ ಬೀದಿನಾಟಕ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಕುರಿಮರಿಯ ಮೇಲೆ ಹುಲಿ ದಾಳಿ ಮಾಡಿರುವುದನ್ನು ಜನ ಮತ್ತು ಸಿಬ್ಬಂದಿ ನೋಡಿದ್ದಾರೆ. ಹುಲಿಯ ವ್ಯಾಪ್ತಿಯನ್ನು ಬದಲಿಸಲು ಸಿಬ್ಬಂದಿ ಕ್ರಮ ವಹಿಸುತ್ತಿದ್ದಾರೆ ಎಂದು ಎಸಿಎಫ್ ಕೆ. ಪರಮೇಶ್ ತಿಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.