ETV Bharat / state

ರಾಘವಪುರ ಜಾತ್ರೆ ಸಂಪನ್ನ: ಮೊದಲ‌ ದಿನ ಪುರುಷರು, ಎರಡನೇ ದಿನ ರಥ ಎಳೆದ ಮಹಿಳೆಯರು - ಅದ್ಧೂರಿಯಾಗಿ ನಡೆದ ರಾಘವಪುರ ಜಾತ್ರೆ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ‌ ರಾಘವಾಪುರ ಗ್ರಾಮದ ಶ್ರೀಪಟ್ಟಲದಮ್ಮ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

Grandly celebration of  Raghavapura Fair
ಅದ್ಧೂರಿಯಾಗಿ ನಡೆದ ರಾಘವಪುರ ಜಾತ್ರೆ
author img

By

Published : Mar 21, 2022, 9:00 AM IST

ಚಾಮರಾಜನಗರ: ಈ ಗ್ರಾಮದಲ್ಲಿ ಪ್ರತಿವರ್ಷ ಸಂಜೆ ಸಮಯ ರಥೋತ್ಸವ ಜರುಗಲಿದ್ದು, ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ ರಥ ಎಳೆದು ಇಷ್ಟಾರ್ಥಕ್ಕಾಗಿ ಬೇಡಿಕೊಂಡರು.

ಅದ್ಧೂರಿಯಾಗಿ ನಡೆದ ರಾಘವಪುರ ಜಾತ್ರೆ

ಗುಂಡ್ಲುಪೇಟೆ ತಾಲೂಕಿನ‌ ರಾಘವಾಪುರ ಗ್ರಾಮದ ಶ್ರೀಪಟ್ಟಲದಮ್ಮ ಜಾತ್ರಾ ಮಹೋತ್ಸವ ಶನಿವಾರ ಪಟ್ಟಲದಮ್ಮ ದೇವಿಯ ಉತ್ಸವ ಮೂರ್ತಿಯನ್ನು ಅಡ್ಡ ಪಲ್ಲಕ್ಕಿಯಲ್ಲಿರಿಸಿ ದೇವಾಲಯದ ಪ್ರದಕ್ಷಿಣೆ ಹಾಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಸಂಜೆ ಉತ್ಸವ ಮೂರ್ತಿಯನ್ನು ತೇರಿನಲ್ಲಿರಿಸಿ ಪುರುಷರು ರಥ ಎಳೆದರು.

ಭಾನುವಾರ ಮಹಿಳೆಯರು ವಿವಿಧ ದೇವರ ಹಾಡುಗಳನ್ನು ಹಾಡುತ್ತ ತೇರು ಎಳೆದು ಮೂಲ ಸ್ಥಾನಕ್ಕೆ ನಿಲ್ಲಿಸಿದ್ದಾರೆ. ರಥ ಸಾಗುವ ದಾರಿ ಉದ್ದಕ್ಕೂ ತೇರಿನ ಚಕ್ರಕ್ಕೆ ಭಕ್ತಾದಿಗಳು ಕಾಯಿ ಒಡೆದು ಇಷ್ಟಾರ್ಥಕ್ಕೆ ಬೇಡಿಕೊಂಡರು.

ಇದನ್ನೂ ಓದಿ: ಮುಂದಿನ 12 ಗಂಟೆಯಲ್ಲಿ ತೀವ್ರತೆ ಪಡೆದುಕೊಳ್ಳಲಿದೆ ಅಸನಿ ಚಂಡಮಾರುತ.. ಕರಾವಳಿ ಪ್ರದೇಶಗಳಿಗೆ ಎಚ್ಚರಿಕೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.