ಚಾಮರಾಜನಗರ: ನ್ಯಾಯಾಲಯದ ಅನುಮತಿ ಮೇರೆಗೆ ಮುಖ್ಯ ರಸ್ತೆಯಲ್ಲಿದ್ದ ಆಂಜನೇಯ ದೇಗುಲವನ್ನು ತೆರವುಗೊಳಿಸಿದ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಇಲ್ಲಿನ ಕೆ.ಎಸ್.ನಾಗರತ್ನಮ್ಮ ಶಾಲಾ ಮುಂಭಾಗವಿದ್ದ ಆಂಜನೇಯ ದೇಗುಲವನ್ನು ರಸ್ತೆ ಅಗಲೀಕರಣ ದೃಷ್ಟಿಯಿಂದ ತಾಲೂಕು ಆಡಳಿತ ಪೊಲೀಸ್ ಭದ್ರತೆಯೊಂದಿಗೆ ತೆರವುಗೊಳಿಸಿತು. ಸಂಚಾರಕ್ಕೆ ತೊಂದರೆಯಾಗಿದ್ದರಿಂದ ಕಳೆದ ನ. 27ರಂದು ಅಂದಿನ ಡಿಸಿಯಾಗಿದ್ದ ಬಿ.ಬಿ.ಕಾವೇರಿ ತೆರವುಗೊಳಿಸಲು ಆದೇಶಿಸಿದ್ದರು. ಅದರಂತೆ ಇಂದು ತೆರವುಗೊಳಿಸಲಾಗಿದೆ.
ಈ ಹಿಂದೆ ಗುಂಡ್ಲುಪೇಟೆಯಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್ ಆದಿಯಾಗಿ ದೇಗುಲ ತೆರವುಗೊಳಿಸದಂತೆ ಹೋರಾಟ ಮಾಡಿದ್ದರು.