ಚಾಮರಾಜನಗರ: ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ದೊಣ್ಣೆವರಸೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಮುರುಗನ್ ಎಂಬ ಯುವಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಗೋಪಿನಾಥಂ ಗ್ರಾಮದ ಮುನಿಸ್ವಾಮಿ ಮತ್ತು ತಂಗಮಣಿ ದಂಪತಿ ಪುತ್ರ ಮುರುಗನ್ (26) ಎಂಬಾತ ನೇಪಾಳದ ಪೋಕರಾ ಎಂಬಲ್ಲಿ ನಡೆದ ದೊಣ್ಣೆವರಸೆ ಸ್ಪರ್ಧೆಯಲ್ಲಿ, ತಮಿಳುನಾಡಿನ 10 ಯುವಕರೊಟ್ಟಿಗೆ ಮುರುಗನ್ ಕೂಡ ಭಾಗಿಯಾಗಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಹವ್ಯಾಸದಿಂದ ಕಲಿತ ಕಲೆ:
ಮುರುಗನ್ ಎಂ ಕಾಂ ಪದವೀಧರನಾಗಿದ್ದು, ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಎಚ್. ಆರ್. ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 6 ವರ್ಷಗಳ ಹಿಂದೆ ಹವ್ಯಾಸವಾಗಿ ರೂಢಿಸಿಕೊಂಡ ಈ ಸಮರಕಲೆಯಲ್ಲಿ ಪ್ರಾವೀಣ್ಯತೆ ಸಾಧಿಸಿ ಈಗ ಚಾಂಪಿಯನ್ ಆಗಿದ್ದಾರೆ.
ಇದನ್ನೂ ಓದಿ: ಕೊಟ್ಟ ಸಾಲ ವಾಪಸ್ ಕೇಳಿದ ಮಹಿಳೆ ಮೇಲೆ ಶೂಟೌಟ್, ಕೊಲೆ: ಸಂಕೇಶ್ವರ ಪುರಸಭೆ ಬಿಜೆಪಿ ಸದಸ್ಯ ಅರೆಸ್ಟ್
ದೊಣ್ಣೆ ವರಸೆಯು ಚೋಳ ಮತ್ತು ಕದಂಬರ ಕಾಲದ ಸಾಂಪ್ರದಾಯಿಕ ಸಮರಕಲೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ. ಇದಕ್ಕೆ ಬಳಸುವ ದೊಣ್ಣೆಯ ತುದಿಯಲ್ಲಿ ಮೊಣಚಾದ ಕಬ್ಬಿಣವನ್ನು ಅಳವಡಿಸಲಾಗಿದ್ದು, ಈಟಿ ಮಾದರಿಯಲ್ಲಿ ಇರಲಿದೆ. ಯುದ್ಧಕಾಲದಲ್ಲಿ ಬಹು ಜನಪ್ರಿಯವಾಗಿದ್ದ ಈ ದೊಣ್ಣೆವರಸೆ ಬರಬರುತ್ತಾ ಸ್ವಯಂ ರಕ್ಷಣೆಗೆ ಬಳಕೆಯಾಗುತ್ತಿತ್ತು. ಆದ್ರೀಗ ಕಣ್ಮರೆಯಾಗುತ್ತಿದ್ದು, ತಮಿಳುನಾಡು ಭಾಗದಲ್ಲಿ ಇತ್ತೀಚೆಗೆ ಈ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಕುಸ್ತಿ ರೀತಿ ವಿವಿಧ ರೀತಿಯ ಪಟ್ಟುಗಳನ್ನು ದೊಣ್ಣೆ ತಿರುಗಿಸುತ್ತಾ ಪ್ರದರ್ಶಿಸಬೇಕಿದೆ. ಸ್ಥಳೀಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಎದುರಾಳಿಗಳಿರಲಿದ್ದು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇವಲ ತಮ್ಮ ವರಸೆಗಳನ್ನು ಮಾತ್ರ ಪ್ರದರ್ಶಿಸಬೇಕಾಗುತ್ತದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ