ETV Bharat / state

ಗಡಿಜಿಲ್ಲೆಯಲ್ಲೊಬ್ಬ ವಿಶೇಷ ಗಣೇಶ ಭಕ್ತ: ಇವರ ಮನೆಯಲ್ಲಿದೆ ಹತ್ತಾರು ರಾಜ್ಯಗಳ ನೂರಾರು ಗಣೇಶ - ಸೋಮವಾರಪೇಟೆಯ ಎಲ್.ಸುರೇಶ್

ಇವರು ಹತ್ತಾರು ರಾಜ್ಯಗಳ ನೂರಾರು ಗಣೇಶನ ಮೂರ್ತಿಗಳನ್ನು ಮನೆಗೆ ತಂದು ನಿತ್ಯವೂ ಪೂಜಿಸುತ್ತಿದ್ದಾರೆ. ಮನೆ ಆವರಣದಲ್ಲಿ ವಿನಾಯಕನ ಮಂದಿರ ನಿರ್ಮಿಸಿ ಉದ್ಯಾನವನ್ನೂ ರೂಪಿಸಿದ್ದಾರೆ.

Ganesh devotee
ವಿನಾಯಕ
author img

By

Published : Aug 22, 2020, 3:23 PM IST

ಚಾಮರಾಜನಗರ: ಇಲ್ಲೊಬ್ಬ ವಿಶೇಷ ವಿನಾಯಕ ಭಕ್ತರಿದ್ದಾರೆ. ಇವರಿಗೆ ಮೋದಕ ಹಸ್ತನನ್ನು ಕಂಡರೆ ಪರಮ ಭಕ್ತಿ. ಇವರ ಮನೆಯಲ್ಲಿ ನೂರಾರು ಗಣಪನ ವಿವಿಧ ಶೈಲಿಯ ಮೂರ್ತಿಗಳ ಸಂಗ್ರಹವಿದೆ.

ನಗರದ ಸೋಮವಾರಪೇಟೆಯ ಎಲ್.ಸುರೇಶ್ ಎಂಬವರು ಗಣಪನ ಅಪ್ಪಟ ಭಕ್ತ. ಹತ್ತಾರು ರಾಜ್ಯಗಳ ನೂರಾರು ಗಣೇಶನ ಮೂರ್ತಿಗಳನ್ನು ಮನೆಗೆ ತಂದು ನಿತ್ಯವೂ ಪೂಜಿಸುತ್ತಿದ್ದಾರೆ. ಮನೆ ಆವರಣದಲ್ಲಿ ವಿನಾಯಕನ ಮಂದಿರ ನಿರ್ಮಿಸಿ ಉದ್ಯಾನ ರೂಪಿಸಿದ್ದಾರೆ. ಮನೆ ಹೆಬ್ಬಾಗಿಲಿನಲ್ಲಿ ದೂರದ ಕೇರಳದ ಗಣಪನ ಮೂರ್ತಿ, ಮನೆ ಒಳಾವರಣದಲ್ಲಿ ರಾಜಸ್ಥಾನ, ಮಹಾರಾಷ್ಟ್ರದ ಗಣೇಶವಿದ್ದು ಮಂದಿರದಲ್ಲಿ ಗುಜರಾತಿನ ಅಮೃತಶಿಲೆ ಗಜಮುಖನಿದ್ದಾನೆ‌‌. ಮಂದಿರದ ಸುತ್ತಲೂ ಪುಟಾಣಿ ಗಣಪನ ಮೂರ್ತಿಗಳಿದ್ದು ಕೇದಾರ, ಬದರಿನಾಥ, ಒಡಿಶಾದಿಂದ ತಂದ ವಿವಿಧ ಭಂಗಿಯ ಗಣೇಶನನ್ನು ಇಲ್ಲಿ ಕಾಣಬಹುದು. ಉದ್ಯಾನದ ಆವರಣದಲ್ಲಿ ಕಣ್ಣು ಹಾಯಿಸುವ ಕಡೆಯಲ್ಲೆಲ್ಲಾ ಬಗೆಬಗೆ ಗಣೇಶನ ದರ್ಶನವಾಗುತ್ತದೆ.

ಈ ಕುರಿತು ಸುರೇಶ್ ಈಟಿವಿ ಭಾರತದೊಂದಿಗೆ ಮಾತನಾಡಿ, ಚಿಕ್ಕಂದಿನಲ್ಲಿ ತಂದೆಯೊಂದಿಗೆ ಕೊಳದ ಗಣಪತಿ ದೇಗುಲಕ್ಕೆ ಹೋಗುತ್ತಿದ್ದೆ. ಅಂದಿನಿಂದಲೇ ಉಳಿದ ದೇವರಿಗಿಂತ ಗಣಪತಿ ಮೇಲೆ ತುಸು ಹೆಚ್ಚೇ ಭಕ್ತಿ, ನಂಬಿಕೆ ಬೇರೂರಿತು. ಜೀವನದಲ್ಲಿ ನೆಲೆಯೂರಲೂ ಗಣಪತಿಯೇ ಕಾರಣ ಎಂದು ನಾನು ನಂಬಿದ್ದೇನೆ. ಹೀಗಾಗಿ, ವಿವಿಧ ರಾಜ್ಯಗಳ ವಿಶೇಷ ಗಣಪತಿ ಮೂರ್ತಿಗಳನ್ನು ತಂದು ಪೂಜಿಸುತ್ತಿದ್ದೇನೆ ಎಂದರು.

ಇವರ ನೆರೆಮನೆಯವರಾದ ನಾಗಚಂದ್ರ ಎಂಬವರು ಮಾತನಾಡಿ, ಸುರೇಶ್ ಅವರ ಮನೆಯಲ್ಲಿ ಅಪರೂಪ ಎನಿಸುವ ಹಾಗೂ ನೋಡಿದ ಕೂಡಲೇ ಭಕ್ತಿ ಹೊಮ್ಮುವ ಹಲವಾರು ಬಗೆಯ ಗಣಪತಿ ವಿಗ್ರಹಗಳಿವೆ. ಇವರ ಗಣೇಶನ ಭಕ್ತಿ ಕಂಡು ನಾವೂ ಕೂಡ ಅವರ ಮನೆಗೆ ತೆರಳಿ ಪೂಜಿಸುತ್ತೇವೆ. ಅಮೃತ ಶಿಲೆ ಗಣಪತಿ, ಉಯ್ಯಾಲೆ ಗಣಪತಿ, ನಾಟ್ಯ ಗಣಪತಿ, 12 ಕೈಗಳ ಗಣಪತಿ ಮೂರ್ತಿಗಳು ಬಹಳ ಆಕರ್ಷಕವಾಗಿವೆ ಎಂದರು.

ವರ್ಷಕ್ಕೊಮ್ಮೆ ಗಣೇಶ ಹಬ್ಬ ಆಚರಿಸುವವರ ನಡುವೆ ಪ್ರತಿದಿನವೂ ತಾಸುಗಟ್ಟಲೆ ಗಣಪನನ್ನು ಪೂಜಿಸಿ, ವಿವಿಧ ರಾಜ್ಯಗಳ ಮೂರ್ತಿಗಳನ್ನು ಸಂಗ್ರಹಿಸಿರುವ ಸುರೇಶ್ ಅಪರೂಪದ ಗಣೇಶ ಭಕ್ತರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.