ETV Bharat / state

ಹಾಡಹಗಲೇ ರಸ್ತೆ ಬದಿ ಜೂಜಾಟ: ತಾ. ಪಂಚಾಯತ್​​ ಸದಸ್ಯ ಸೇರಿ 8 ಮಂದಿ ಬಂಧನ! - ಚಾಮರಾಜನಗರ

ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯ ಸಮೀಪ ರಸ್ತೆ ಬದಿಯಲ್ಲೇ ಜೂಜಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ.

arrest
ಬಂಧನ
author img

By

Published : Mar 18, 2020, 9:43 PM IST

ಚಾಮರಾಜನಗರ: ರಸ್ತೆ ಬದಿಯಲ್ಲೇ ಜೂಜಾಟ ಆಡುತ್ತಿದ್ದ ಪ್ರಕರಣದಲ್ಲಿ ತಾಲೂಕು ಪಂಚಾಯತ್​​ ಸದಸ್ಯ ಸೇರಿ 8 ಮಂದಿ ಬಂಧನವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯ ಸಮೀಪ ನಡೆದಿದೆ.

ತಾಲೂಕು ಪಂಚಾಯತ್​ ಸದಸ್ಯ ಮಹಾದೇವಶೆಟ್ಟಿ ಹಾಗೂ ಸ್ಥಳೀಯರಾದ 7 ಮಂದಿ ಹಾಡಹಗಲೇ ರಸ್ತೆ ಬದಿಯಲ್ಲೇ ಅಂದರ್- ಬಾಹರ್ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ.

ಬಂಧಿತರಿಂದ 11,050 ರೂಪಾಯಿ ನಗದನ್ನು ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ತಾಲೂಕು ಪಂಚಾಯಿತಿ ಸದಸ್ಯನೇ ಜೂಜಾಟದಲ್ಲಿ ತೊಡಗಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.