ಗುಂಡ್ಲುಪೇಟೆ: ತಾಲೂಕಿನ ಮಾದಾಪಟ್ಟಣ ಸಮೀಪ ಬೈಕ್ನಿಂದ ಬಿದ್ದು ಅರಣ್ಯ ಇಲಾಖೆಯ ಮಹಿಳಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ತಾಲೂಕಿನ ಹಂಗಳ ಗ್ರಾಮದ ರಾಜಮ್ಮ (51) ಮೃತ ಮಹಿಳೆ. ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮಕ್ಕೆ ಹೋಗುತ್ತಿರುವಾಗ ಈ ಘಟನೆ ನಡೆದಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ .
ರಾಜಮ್ಮ ಪತಿ ಸ್ವಾಮಿನಾಯಕ್ ಕಳೆದ ಹದಿನೈದು ವರ್ಷಗಳ ಹಿಂದೆ ಮೇಲುಕಾಮನಹಳ್ಳಿ ಸಮೀಪ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ರಾಜಮ್ಮ ಕಳೆದ ಹತ್ತು ವರ್ಷಗಳಿಂದ ಬಂಡೀಪುರದ ವಲಯ ಅರಣ್ಯ ಕಚೇರಿಯ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದರು. ಮೃತರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗಳಿದ್ದಾಳೆ.