ETV Bharat / state

ಶಾಸಕ ಎನ್.ಮಹೇಶ್ ತೇಜೋವಧೆ ಆರೋಪ: ಏಳು ಮಂದಿ ವಿರುದ್ಧ ಎಫ್​ಐಆರ್ - Kolegala town police station

ಮಾಜಿ ಶಿಕ್ಷಣ ಸಚಿವರು ಹಾಗೂ ಹಾಲಿ ಶಾಸಕ ಎನ್. ಮಹೇಶ್ ಬಗ್ಗೆ ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಬರಹ, ವ್ಯಂಗ್ಯ ಚಿತ್ರ ಹಾಗೂ ವಿಡಿಯೋಗಳನ್ನು ಹಾಕಿ ತೇಜೋವಧೆ ಮಾಡುತ್ತಿದ್ದ ಆರೋಪದಡಿ 7 ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

Kolegala town police station
ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆ
author img

By

Published : Aug 22, 2020, 5:54 PM IST

ಕೊಳ್ಳೇಗಾಲ: ಶಾಸಕ ಎನ್.ಮಹೇಶ್ ಬಗ್ಗೆ ಫೇಸ್​ಬುಕ್​ನಲ್ಲಿ ಅವಹೇಳನಕಾರಿ‌ ಬರಹ, ವ್ಯಂಗ್ಯ ಚಿತ್ರ ಹಾಗೂ ವಿಡಿಯೋಗಳನ್ನು ಹಾಕಿ ತೇಜೋವಧೆ ಮಾಡುತ್ತಿದ್ದ 7 ಆರೋಪಿಗಳ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಶಾಸಕ ಎನ್.ಮಹೇಶ್​ಗೆ ತೇಜೋವಧೆ: ಏಳು ಮಂದಿ ಮೇಲೆ ಎಫ್​ಐಆರ್

ತಾಲೂಕಿನ ಕೆಂಪನಪಾಳ್ಯ ಗ್ರಾಮದ ಸಿದ್ದರಾಜು ಎಂಬುವವರು ಈ ಕುರಿತು ಪಟ್ಟಣ ಠಾಣೆಗೆ ದೂರು ನೀಡಿದ್ದು, ಪೊಲೀಸರು ಈ ಸಂಬಂಧ ಜೆ.ಎಂ.ಎಫ್ .ಸಿ ನ್ಯಾಯಲಯದ ಅನುಮತಿ ಪಡೆದು ಶ್ರೀಕಾಂತ್ ಅಪ್ಪಗೆರೆ, ಮಹಿಮಹೀಷ, ಮೋಹನ್ ಮೂಕನಾಯಕ, ಸದಾಶಿವ ರಾವಣ್, ಮುರುಳೀಧರ ಮೌರ್ಯ ಹಾಗೂ ರವಿಕುಮಾರ್ ಎಂಬುವವರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.

ಘಟನೆ ವಿವರ: ಶಾಸಕ‌ ಎನ್. ಮಹೇಶ್ ಬಿಎಸ್​​​ಪಿಯಿಂದ ಉಚ್ಛಾಟನೆಗೊಂಡ ಬಳಿಕ ಎನ್.ಮಹೇಶ್ ವಿರುದ್ದ ಫೇಸ್​ಬುಕ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಕೀಳು ಶಬ್ಧಗಳಿಂದ ಟೀಕಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಜು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪಿಎಸ್ಐ ರಾಜೇಂದ್ರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.