ETV Bharat / state

ಕೊಳ್ಳೇಗಾಲದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಅಪ್ಪ-ಮಗನ ಬಂಧನ - Kollegala Father and son arrest news

ಕೊಳ್ಳೇಗಾಲದ ಸಿದ್ದಯ್ಯನಪುರ ಮುಖ್ಯರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ತಂದೆ, ಮಗನನ್ನು ಪೊಲೀಸರು ಬಂಧಿಸಿ, 480 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ.

Arrest
Arrest
author img

By

Published : Sep 17, 2020, 2:46 PM IST

ಚಾಮರಾಜನಗರ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಅಪ್ಪ-ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ಕೊಳ್ಳೇಗಾಲದ ಸಿದ್ದಯ್ಯನಪುರ ಮುಖ್ಯರಸ್ತೆಯಲ್ಲಿ ನಡೆದಿದೆ.

ಕೊಳ್ಳೇಗಾಲ ತಾಲೂಕಿನ‌ ಇಕ್ಕಡಹಳ್ಳಿ ಗ್ರಾಮದ ನೀಲಸಿದ್ದಶೆಟ್ಟಿ ಮತ್ತು ಅವರ ಮಗ ಸೋಮಣ್ಣ ಬಂಧಿತ ಆರೋಪಿಗಳು.‌ ಇವರು ಗಾಂಜಾ‌ ಮಾರಾಟ ಮಾಡಲು ಬಂದಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಪಟ್ಟಣ ಠಾಣೆ ಪಿಎಸ್ಐ ರಾಜೇಂದ್ರ ನೇತೃತ್ವದ ತಂಡ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಇನ್ನು ಬಂಧಿತರಿಂದ 480 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಈ ಕುರಿತು ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.