ಚಾಮರಾಜನಗರ: ಭತ್ತದ ಗದ್ದೆಗೆ ನೀರು ನುಗ್ಗಿ ಬೆಳೆಹಾನಿ ಆಗಿದ್ದರಿಂದ ಬೇಸತ್ತ ರೈತನೋರ್ವ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಮೋಳೆ ಗ್ರಾಮದ ರಾಮಕೃಷ್ಣ ಎಂಬ ರೈತ ಆತ್ಮಹತ್ಯೆಗೆ ಯತ್ನಿಸಿದವರು. ಕಬಿನಿ ನಾಲೆಯ ನೀರು ಹೆಚ್ಚಾಗಿ ಇವರ ಮೂರೂವರೆ ಎಕರೆ ಭತ್ತದ ಗದ್ದೆ ಜಲಾವೃತಗೊಂಡು ಬೆಳೆ ಸಂಪೂರ್ಣ ನಷ್ಟ ಆಗಿದೆ. ಇದರಿಂದ ಬೇಸತ್ತು ಎಸಿ ಕಚೇರಿ ಆವರಣದ ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರೈತನನ್ನು ಕೆಳಗಿಳಿಸಿ ಎಸಿ ಗೀತಾ ಹುಡೇದ ಬಳಿ ಕಳುಹಿಸಿದ್ದಾರೆ. ರೈತ ರಾಮಕೃಷ್ಣ ಅವರನ್ನು ಸಂತೈಸಿ ಮನವೊಲಿಸಿದ ಎಸಿ ಅವರು ಗದ್ದೆಗೆ ತೆರಳಿ ಬೆಳೆಹಾನಿ ವೀಕ್ಷಿಸಿ ತುರ್ತು ಪರಿಹಾರ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಗದಗ: ಬೆಳೆಹಾನಿ ಪರಿಶೀಲಿಸಿ ಪರಿಹಾರದ ಭರವಸೆ ನೀಡಿದ ಸಚಿವ ಬಿ.ಸಿ.ಪಾಟೀಲ್